ನಗರಾಡಳಿತಕ್ಕೆ ತಿಳಿಸಿದ್ದರೂ ಯಾಕೆ ಮೌನ – ಪ್ರಶ್ನಿಸುತಿದ್ದಾರೆ ಸ್ಥಳೀಯರು
ಸುಳ್ಯದ ಒಳಚರಂಡಿ ರಸ್ತೆಯಲ್ಲಿ ಅಲ್ಲಲ್ಲಿ ಬಾಯ್ ಬಿಟ್ಟು ಅದರ ನೀರು ಹೊರ ಹರಿದು ಸಾರ್ವಜನಿಕರಿಗೆ ಕಿರಿಕಿರಿ ಆಗಾಗ್ಗೆ ಆಗುತಿದೆ. ಇದೀಗ ಕುರುಂಜಿಭಾಗ್ ನಲ್ಲಿ ಈ ಸಮಸ್ಯೆ ಎದುರಾಗಿದೆ.
ಕೆ.ಇ.ಬಿ. ರಸ್ತೆಯಲ್ಲಿ ಕೆ.ವಿ.ಜಿ. ಜಂಕ್ಷನ್ ಗೆ ಹೋಗುವ ರಸ್ತೆಯ ಮಧ್ಯೆ ಒಳಚರಂಡಿ ಒಡೆದು ನೀರು ಹೊರ ಹರಿಯುತಿದೆ. ರಸ್ತೆಯಲ್ಲಿ ಒಳಚರಂಡಿ ತ್ಯಾಜ್ಯ ನೀರು ಹರಿಯುವುದರಿಂದ ದುರ್ವಾಸನೆಯೊಂದಿಗೆ ಸ್ಥಳೀಯರಿಗೆ, ಸಾರ್ವಜನಿಕರಿಗೆ ಕಿರಿ ಕಿರಿ ಆಗತೊಡಗಿದೆ.
ಈ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನಡೆದು ಸಂಸ್ಥೆಗಳಿಗೆ ಹೋಗುತಿದ್ದಾರೆ. ವಾಹನಗಳು ಹೋಗುವಾಗ ನೀರು ವಿದ್ಯಾರ್ಥಿಗಳಿಗೆ ತಾಗುತಿದೆ.
ಈ ಸಮಸ್ಯೆ ಸುಮಾರು 10 ದಿವಸಗಳಿಂದ ಕಂಡು ಬಂದಿದ್ದು ಸ್ಥಳೀಯ ವಾರ್ಡ್ ಸದಸ್ಯರ ಗಮನಕ್ಕೂ ತರಲಾಗಿದೆ. ನಗರಾಡಳಿತಕ್ಕೂ ತಿಳಿಸಲಾಗಿದೆ. ಎಲ್ಲರೂ ಬಂದು ನೋಡಿ ಹೋಗಿದ್ದಾರೆ ಆದರೆ ಸಮಸ್ಯೆ ಪರಿಹಾರಕ್ಕೆ ಏನೂ ಕ್ರಮಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.