Home ಕ್ರೈಂ ನ್ಯೂಸ್ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತ್ಯು

ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತ್ಯು

0

ವ್ಯಾಪಾರ ವ್ಯವಹಾರದಲ್ಲಿ ವಂಚನೆಗೊಳಗಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತ ಪಟ್ಟಿರುವುದಾಗಿ ವರದಿಯಾಗಿದೆ.

ಗಾಂಧಿನಗರ ಅಡಿಕೆ ಅಂಗಡಿಯಲ್ಲಿ ಅಕೌಂಟ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕ ಅಭಿಲಾಷ್ ಮೃತ ಪಟ್ಟ ಯುವಕ.

ಸುಳ್ಯದ ಗಾಂಧಿನಗರ ಅಡಿಕೆ ಅಂಗಡಿಯಲ್ಲಿ ಮ್ಯಾನೇಜರ್ ಕಮ್ ಅಕೌಂಟ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಭಿಲಾಷ್ ರವರನ್ನು ಚಿಕಿತ್ಸೆ ಗಾಗಿ
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ನ.5 ರಂದು ದಾಖಲಿಸಲಾಗಿತ್ತು.

ಮಂಗಳೂರಿನಲ್ಲಿರುವ ತನ್ನ ಮನೆಯಿಂದ ಹಿಂತಿರುಗುವ ಸಂದರ್ಭದಲ್ಲಿ
ಕಲ್ಲಡ್ಕದಲ್ಲಿರುವ ಅಂಗಡಿಯೊಂದರಿಂದ ರ್ಯಾಟೋಲ್ ಖರೀದಿಸಿ ಕಾರಿನಲ್ಲಿ ಬರುವಾಗ ಸೇವಿಸಿದ್ದರು.

ಸ್ಲೋ ಪಾಯಸನ್ ಸೇವಿಸಿದ್ದರಿಂದ ವೈದ್ಯರು ಪರೀಕ್ಷೆ ನಡೆಸಿ ವಿಷ ಪದಾರ್ಥವನ್ನು ಶರೀರದಿಂದ ಹೊರತೆಗೆಯುವ ಚಿಕಿತ್ಸಾ ಕ್ರಮವನ್ನು ಕೈಗೊಂಡಿದ್ದರು.
ಸ್ಲೋ ಪಾಯಸನ್ ಸೇವಿಸಿ ಸುಮಾರು 12 ಗಂಟೆಗಳ ಕಾಲ ಕಳೆದು ಹೋದ ಕಾರಣದಿಂದ ಚಿಕಿತ್ಸೆಗೆ ಸ್ಪಂದಿಸದೆ ಇದ್ದುದರಿಂದ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತರು ತಂದೆ ಬಿ.ಎಸ್.ಎನ್.ಎಲ್.ಉದ್ಯೋಗಿ ಗಂಗಾಧರ, ತಾಯಿ ಶ್ರೀಮತಿ ಯಶೋಧ, ಪತ್ನಿ ಶ್ರೀಮತಿ ನಿಶಾ,ಸಹೋದರಿ ಶ್ರೀಮತಿ ಅಮೃತಾ ಮತ್ತು ಬಾವ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking