ಅಜ್ಜಾವರ ಗ್ರಾಮದ ಅಡ್ಪಂಗಾಯ ಸ.ಹಿ.ಪ್ರಾ.ಶಾಲೆಯಲ್ಲಿ ಮಾತೆಯರ ದಿನವನ್ನು ಮಾತೆಯರ ಸಮಿತಿ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಮುಡೂರು ರವರ ನೇತೃತ್ವದಲ್ಲಿ ಆಚರಿಸಲಾಯಿತು.
ಶಾಲಾ ಪೌಷ್ಟಿಕ ತೋಟ ನಿರ್ಮಾಣದ ನಂತರ ,ಮಾತೆಯರಿಗೆ ಮನರಂಜನೆಯ ಆಟಗಳನ್ನು ಆಡಿಸಲಾಯಿತು.ಬಳಿಕ ಮಕ್ಕಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಂದ ಸಂತಸ ನೀಡಿದರು .ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಟ್ಟರು.
ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಸುರೇಖಾ ರೈ ಡಿ,ಮತ್ತು ಸಹಶಿಕ್ಷಕಿಯರಾದ ನರ್ಮದಾ,ವೀಣಾ,ಸ್ವಪ್ನಾ ,ಶ್ವೇತಾ, ನಿಖಿತಾ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.