ಸುಳ್ಯ ಶ್ರೀ ರಾಮಪೇಟೆಯ ಶ್ರೀ ರಾಮ ಮಂದಿರದಲ್ಲಿ 82 ನೇ ವರ್ಷದ ಏಕಾಹ ಭಜನಾ ಸಂಕೀರ್ತನೆಯು ನ.13 ರಂದು ಸಂಪನ್ನಗೊಂಡಿತು.
ಪ್ರಾತ:ಕಾಲ ಭಜನಾ ಸಂಕೀರ್ತನೆಯ ದೀಪ ಸ್ಥಾಪನೆಯನ್ನು ಕಾರ್ಕಳ ವೆಂಕಟ್ರಮಣ ದೇವಸ್ಥಾನ ಮತ್ತು ಮೂಡು ಮಹಾಗಣಪತಿ ದೇವಸ್ಥಾನದ
ಮೆನೇಜಿಂಗ್ ಟ್ರಸ್ಟಿ ಮೋಹನದಾಸ ಶೆಣೈ ಯವರು ನೆರವೇರಿಸಿದರು.
ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ನಿರಂತರ 24 ಗಂಟೆಗಳ ಕಾಲ ಭಜನಾ ಸಂಕೀರ್ತನೆಯು ನಡೆಯಿತು.
ಬ್ರಹ್ಮ ಶ್ರೀ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮವು ನೆರವೇರಿತು.
ಮಧ್ಯಾಹ್ನ ಮಹಾಪೂಜೆಯಾಗಿ ಸಂಜೆ ವಿಶೇಷವಾಗಿ ಹೂವಿನ ಅಲಂಕಾರ ಪೂಜೆಯು ನಡೆಯಿತು.
ಈ ಸಂದರ್ಭದಲ್ಲಿ
ರಾತ್ರಿ ಖ್ಯಾತ ದಾಸ ಸಂಕೀರ್ತನಕಾರ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ ದಾಸ ಸಂಕೀರ್ತನೆಯು ನಡೆಯಿತು.
ರಾತ್ರಿ ಮಹಾಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.
ಈ ಸಂದರ್ಭದಲ್ಲಿ ಸೇವಾ ರೂಪದ ಉಲುಪೆಯ ಮೆರವಣಿಗೆಯು ರಾಮ ಸೇವಾ ಸಮಿತಿ ಜಟ್ಟಿಪಳ್ಳ, ಚೆನ್ನಕೇಶವ ದೇವಸ್ಥಾನದ ಬಳಿಯಿಂದ, ಬಂಗ್ಲೆಗುಡ್ಡೆ ಬಳಿಯಿಂದ, ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿ, ಕಾಯರ್ತೋಡಿ ವಿಷ್ಣು ಸರ್ಕಲ್, ಧರ್ಮದರ್ಶಿ ಮಂಡಳಿಯ ಪರವಾಗಿ ಖಾಸಗಿ ಬಸ್ ನಿಲ್ದಾಣದ ಬಳಿಯ ಪೆಟ್ರೋಲ್ ಬಂಕಿನಿಂದ
ಮಂದಿರದವರೆಗೆ ಸಾಗಿ ಬಂತು. ಈ ಸಂದರ್ಭದಲ್ಲಿ ವಿಶೇಷವಾಗಿ ಸಿಡಿ ಮದ್ದಿನ ಪ್ರದರ್ಶನವಾಯಿತು.
ಮರುದಿನಸೂರ್ಯೋದಯಕ್ಕೆಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆಯೊಂದಿಗೆ ಭಜನಾ ಸಂಕೀರ್ತನೆಯು ಸಂಪನ್ನಗೊಂಡಿತು.
ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ಕೆ.ಉಪೇಂದ್ರ ಪ್ರಭು, ಉಪಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಕಾರ್ಯದರ್ಶಿ ಶ್ರೀನಿವಾಸ ರಾವ್, ಜತೆ ಕಾರ್ಯದರ್ಶಿ ಮಹಾಬಲ ಯು.ಕೆ, ಸದಸ್ಯರು ಹಾಗೂ ಗೌರವ ಸಲಹೆಗಾರರು, ಶ್ರೀ ರಾಮ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಕೇರ್ಪಳ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಆಗಮಿಸಿದ ಭಕ್ತಾದಿಗಳಿಗೆ ನಿರಂತರವಾಗಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಮಂದಿರವನ್ನು ಆಕರ್ಷಕ ವಿದ್ಯುದೀಪಗಳಿಂದ ಅಲಂಕರಿಸಲಾಗಿತ್ತು.