ದ.ಕ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಮಹಿಳೆಯರಿಗೆ ಕ್ರೀಡಾಕೂಟವು ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ನ .14 ರಂದು ನಡೆಯಿತು .
ಕ್ರೀಡಾಜ್ಯೋತಿಯನ್ನು ಕ್ರೀಡಾಪಟು ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಧರ್ಮಕಲಾ ಹಾಗೂ ಜಯಂತಿ ಸೇರಿ ಸಂಪಾಜೆ ಗ್ರಾಂ.ಪಂ ಅಧ್ಯಕ್ಷರಾದ ಸುಮತಿ ಶಕ್ತಿವೇಲು ರವರಿಗೆ ಹಸ್ತಾಂತರಿಸಿದರು.
ಬಳಿಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಲ್ಲುಗುಂಡಿ ಚರ್ಚ್ ನಧರ್ಮಗುರುಗಳು & ಶಾಲಾ ಸಂಚಾಲಕರಾದ ಫಾದರ್ ಪಾವುಲ್ ಕ್ರಾಸ್ತಾ ಮಾತನಾಡಿ “ಕ್ರೀಡೆ ಮನಸ್ಸಿಗೆ ಉಲ್ಲಾಸ ಉತ್ಸಾಹ ನೀಡುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಜಾತಿ- ಧರ್ಮ- ಬೇಧ ಮೀರಿ ಪ್ರೀತಿ ಸಾಮರಸ್ಯ ಮಾನವೀಯತೆ ಮೂಡಿ ಮನುಷ್ಯನನ್ನು ಒಂದುಗೂಡಿಸುತ್ತದೆ. ಅಲ್ಲದೆ ಸಂಪಾಜೆ ಗ್ರಾಮ ಅಭಿವೃದ್ಧಿಯ ಗ್ರಾಮ ಅದರಲ್ಲೂ ಈ ಕ್ರೀಡಾಕೂಟ ಯಶಸ್ವಿ ಆಗಲಿ” ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರುಗಳಾದ ಜಿ. ಕೆ. ಹಮೀದ್ ಗೂನಡ್ಕ , ಸುಂದರಿ ಮುಂಡಡ್ಕ , ಸಂಪಾಜೆ ಗ್ರಾ.ಪoಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜಾ, ಗ್ರಾಂ.ಪಂಸದಸ್ಯರಾದ ವಿಮಲಾ ಪ್ರಸಾದ್, ಅನುಪಮ ಸುಶೀಲ, ಮಾಜಿ ಉಪಾಧ್ಯಕ್ಷರು ಆಶಾ ವಿನಯಕುಮಾರ್ , ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಿಲ್ಪಾ ಸನತ್ ,
ಆಶಾಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ, ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಪಂಚಾಯತ್ ಸಿಬ್ಬಂದಿ ವರ್ಗ , ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಬಳಿಕ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಫರ್ಧೆಗಳು ನಡೆಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ.ಹನೀಫ್ ಸ್ವಾಗತಿಸಿ. ಕೃಷಿ ಸಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿ, ಕ್ರೀಡಾ ಕೂಟದ ನಿರ್ಣಾಯಕರಾಗಿ ಸವೇರಪುರ ಆಂಗ್ಲ ಮಾಧ್ಯಮಶಾಲಾ ದೈಹಿಕ ಶಿಕ್ಷಕಿ ಶೃತಿ ಕಲ್ಲುಗುಂಡಿ ಸರಕಾರಿ ಶಾಲಾ ದೈಹಿಕ ಶಿಕ್ಷಕಿ ಸುಜಯ ಸಕರಿಸಿದರು.