ಸುಳ್ಯ ಅಜ್ಜಾವರ ಎಬಿ ಎಂಟರ್ ಪ್ರೈಸಸ್ ಮಾಲಕ ಎಬಿ ಆಶ್ರಫ್ ಸಹದಿ ಮಾಲಕತ್ವದ ಎಬಿ ಬಿಗ್ ಬಜಾರ್ ಹೊಲ್ ಸೆಲ್ ಮಾರಟ ಮಳಿಗೆ ಸುಳ್ಯ ಗಾಂಧಿನಗರ ಜುಮ್ಮಾ ಮಸೀದಿ ಮುಂಭಾಗ ಪಿಎ ಆರ್ಕೇಡ್ ನಲ್ಲಿ ನ.13 ರಂದು ಶುಭಾರಂಭ ಗೊಂಡಿತು.
ಉದ್ಘಾಟನ ಸಮಾರಂಭಕ್ಕೂ ಮುನ್ನ. ಸಯ್ಯದ್ ಕುಂಞಿಕೋಯ ತಂಙಳ್ ದುವಾಶಿರ್ವಚನ ಮಾಡಿದರು.
ಹಿರಿಯರಾದ ಹಾಜಿ ಇಬ್ರಾಹಿಂ ಸಂಕೇಶ್ ಮಳಿಗೆ ಉದ್ಘಾಟಿಸಿದರು.ಸುಳ್ಯದಲ್ಲಿ ವಿಭಿನ್ನ ಶೈಲಿಯ ಮಳಿಗೆಯಾಗಿ ಶುಭಾರಂಭಗೊಂಡೊದಿ ಇ ಮಳಿಗೆಯನ್ನು ಆರಂಬಿಸಿದ ಎಬಿ ಸಹದಿಯವರು ಉದ್ಯಮದಲ್ಲಿ ಏಳು ಬಿಳು ಕಂಡವರು ಅನೇಕ ಜನರಿಗೆ ಉದ್ಯೋಗವನ್ನು ನೀಡಿದವರು ಅವರ ಉದ್ಯಮದ ವೊಲ್ ಸೆಲ್ ಉದ್ಯಮದ ಮಳಿಗೆಯನ್ನು ಸುಳ್ಯದಲ್ಲಿ ತೆರೆದಿದ್ದು ಬಹಳ ಉತ್ತಮ ಕೆಲಸ ಇ ಮಳಿಗೆ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿಬಿ ಸುಧಾಕರ ರೈ ಹಾರೈಸಿದರು.
ಬೆಳೆಯುತ್ತಿರುವ ಸುಳ್ಯಕ್ಕೆ ಇಂತಹ ಉದ್ಯಮಗಳು ಅವಶ್ಯಕ.ಉದ್ಯಮದಲ್ಲಿ ಅರೋಗ್ಯಕರ ಸ್ಪರ್ಧೆ ನೀಡಿ ನಯ ವಿನಯದ ಸೇವೆ ನೀಡಿದರೆ ಉದ್ಯಮ ಯಶಸ್ವಿಯಾಗಿ ನಡೆಯಲು ಸಾಧ್ಯ ಸುಳ್ಯದ ಜನರಿಗೆ ಸಮಯ ಉಳಿತಾಯದೊಂದಿಗೆ ಹಣವು ಉಳಿತಾಯ ಬಾಗುತ್ತದೆ ಎಂದು ಸುಳ್ಯ ಪೊಲೀಸ್ ವೃತ ನಿರೀಕ್ಷರಾದ ತಿಮ್ಮಪ್ಪ ನಾಯ್ಕ್ ಶುಭ ಹಾರೈಸಿದರು.
ಗೃಹ ಉಪಯೋಗಿ ವಸ್ತುಗಳ ಮಾರಟ ಮಳಿಗೆ ಸುಳದಲ್ಲಿ ಯಶಸ್ವಿಯಾಗಿ ನಡೆಯಲಿ ಎಂದು ದ.ಕ ಜಿಲ್ಲಾ ಗೌಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಶುಭ ಹಾರೈಸಿದರು.ನ.ಪಂ ಮಾಜಿ ಅಧ್ಯಕ್ಷರಾದ ಎಂ ವೆಂಕಪ್ಪ ಗೌಡ,
ಎಪಿಎಂಸಿ ಮಾಜಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ,ಉಮ್ಮರ್ ಕೆ ಎಸ್,ರಿಯಾಜ್ ಕಟ್ಟೆಕ್ಕಾರ್, ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆ ಎಂ ಎಸ್,ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್, ಮೂಸ ಪೈಂಬಚ್ಚಾಲ್, ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ ಕಟ್ಟೆಕ್ಕಾರ್, ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ,ಉದ್ಯಮಿಗಳಾದ ಹಮೀದ್ ಜನತಾ, ಉಮ್ಮರ್ ಹಾಜಿ ಕಟ್ಟೆಕ್ಕಾರ್, ರಜಾಕ್ ಹಾಜಿ ರಾಜಧಾನಿ, ರಜಾಕ್ ಹಾಜಿ ಶಿತಲ್,ಎಸ್ ಪಿ ಅಬೂಭಕ್ಕರ್, ಮೊದಲಾದವರು ಉಪಸ್ಥಿತರಿದ್ದರು.
ಕಟ್ಟಡ ಮಾಲಕ ಹಾಜಿ ಪಿ ಎ ಮಹಮ್ಮದ್ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉದ್ಘಾಟನ ಸಮಾರಂಭದ ಅತಿಥಿಗಳಲ್ಲೊರ್ವರಾದ ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್ ರವರು ಎಬಿ ಬಿಗ್ ಬಜಾರ್ ಮಾಲಕ ಎಬಿ ಅಶ್ರಫ್ ಸಹದಿ ಯವರನ್ನು ಸನ್ಮಾನಿಸಿ ಗೌರವಿಸಿ ಪ್ರಥಮ ಗ್ರಾಹಕರಾದರು.
ಮಳಿಗೆಯಲ್ಲಿ ಎಲ್ಲಾ ತರಹದ ಪೇಪರ್ ಪ್ಲೇಟ್,ಗ್ಲಾಸ್,ಗೃಹ ಉಪಯೋಗಿ ವಸ್ತುಗಳು,ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬೇಕಾಗುವ ಪ್ಲೇಟ್, ಗ್ಲಾಸ್,ಟೇಬಲ್ ಹಾಕುವ ಶೀಟ್,ಗಾರ್ಬೇಜ್ ಬ್ಯಾಗ್,ಟಿಶು,ಪ್ಲಾಸ್ಟಿಕ್ ಬಕೆಟ್,ಮೊಪ್,ಬಟ್ಟೆ ವಾಶ್ ಮಾಡುವ ಲಿಕ್ವಿಡ್, ಹೊಟೇಲ್ ಗಳಿಗೆ ಬೇಕಾಗುವ ಸ್ಪೋಯಿಲ್ ಪೇಪರ್,ಕಂಟೇನರ್, ಹಾಗೂ ಇನ್ನಿತರ ಸಾಮಾಗ್ರಿಗಳು ಹೊಲ್ ಸೆಲ್ ದರದಲ್ಲಿ ದೊರೆಯುತ್ತದೆ.
ಶುಭಾರಂಭದ ಪ್ರಯುಕ್ತ ಮೂರು ವೊಲ್ ಸೆಲ್ ದರದಲ್ಲೂ ವಿಶೇಷ ರಿಯಾಯಿತಿಯಲ್ಲಿ ಮಾರಟಮಾಡಲಾಗುವುದು.ಅಲ್ಲದೆ ವಾರಕ್ಕೆ ಎರಡು ದಿನ ರಿಯಾಯಿತಿ ದರದಲ್ಲಿ ಮಾರಾಟ ಮೇಳ ನಡೆಯುತ್ತದೆ ಎಂದು ಸಂಸ್ಥೆ ಮಾಲಕ ಎಬಿ ಅಶ್ರಫ್ ಸಹದಿ ತಿಳಿಸಿದರು.
ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.