ಸುಳ್ಯದ ಕೆ.ಎಸ್. ಆರ್.ಟಿ.ಸಿ. ಬಸ್ ಸಮಸ್ಯೆ ಹಿನ್ನೆಲೆ – ಬೆಂಗಳೂರಿನಲ್ಲಿ ಸಾರಿಗೆ ಸಚಿವರನ್ನು ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ

0

ಒಂದು ವಾರದೊಳಗೆ ಹತ್ತು ಬಸ್ಸುಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸಚಿವರ ಸೂಚನೆ

ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಕೆ.ಎಸ್.ಆರ್. ಟಿ.ಸಿ ಬಸ್ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನ .14 ರಂದು ಸಾರಿಗೆ ಸಚಿವರಾದ ಮಾನ್ಯ ರಾಮಲಿಂಗ ರೆಡ್ಡಿಯವರನ್ನು ಭೇಟಿಯಾದರು.

ಈ ಹಿಂದೆ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಬಸ್ ಸಮಸ್ಯೆ ಎದುರಾಗಿತ್ತಿದ್ದು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಮನವಿ ನೀಡಿದರು. ಬಳಿಕ ಸಚಿವರು ಒಂದು ವಾರದ ಒಳಗೆ ಸುಳ್ಯ ವ್ಯಾಪ್ತಿಗೆ 10 ಬಸ್ ಒದಗಿಸುವಂತೆ ಕೆ. ಎಸ್ .ಆರ್ . ಟಿ. ಸಿ ಡಿಸಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಕ್ಷೇತ್ರದ ವಿವಿಧ ದೇವಾಲಯದ ಜೀರ್ಣೊದ್ದಾರಕ್ಕೆ ಅನುದಾನವನ್ನು ಬಿಡುಗಡೆ ಮಾಡುವಂತೆಯೂ ಮನವಿ ನೀಡಿದರು.