ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚಿಗೆ ಪ್ರಶ್ನಾಚಿಂತನೆಯಲ್ಲಿ ಸೂಚಿಸಿದಂತೆ ದೇಗುಲದ ಜೀರ್ಣೋದ್ಧಾರ ಕೆಲಸಗಳಾದ ರಕ್ತೇಶ್ವರಿ ಕಟ್ಟೆ, ಗಣಪತಿ ಗುಡಿಯ ಎದುರು ಅಗಲೀಕರಣ, ಸೇವಾ ಕೌಂಟರ್ ಕೆಲಸ,ರಥದ ಶೆಡ್ ಕೆಲಸ ಹಾಗೂ ಯಾಗ ಶಾಲೆ ಕೆಲಸಗಳಿಗೆ ನ. 18 ರಂದು ಚಾಲನೆ ದೊರೆಯಲಿದೆ.
ಈ ಬಗ್ಗೆ ವಾಸ್ತ್ತುಶಿಲ್ಪಿಗಳಾದ ಮುನಿಯಂಗಳ ಕೃಷ್ಣ ಪ್ರಸಾದ್ ರವರನು ಭೇಟಿ ಮಾಡಿ ಅವರ ಮಾರ್ಗದರ್ಶನ ಪಡೆದು ಕ್ಷೇತ್ರ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ಬೇಟಿ ಮಾಡಿ ನ. 18 ರಂದು ಬೆಳಗ್ಗೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡಿ ಕೆಲಸ ಪ್ರಾರಂಭಿಸುವುದಾಗಿ ನಿರ್ಣಯಿಸಲಾಗಿದೆ.
ರಕ್ತೇಶ್ವರಿ ಪುನಃ ಪ್ರತಿಷ್ಟಾಪನೆ ಜ. 16 ರಿಂದ 18 ರವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರ ತಂತ್ರಿಗಳಾದ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ತಿಳಿಸಿದ್ದಾರೆ.