ಬೆಳ್ಳಾರೆಯ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದಲ್ಲಿ ಏಕಹಾ ಭಜನೆ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನ. 12ರಿಂದ ನ. 16ರ ತನಕ ವಿಜೃಂಭಣೆಯಿಂದ ನಡೆಯಿತು.
ನ. 12ರಂದು ಸಂಜೆ ಪ್ರಾರ್ಥನೆ, ದೀಪೋಜ್ವಲನದ ಬಳಿಕ ಬೆಳಿಗ್ಗೆ ತನಕ ಅಹೋರಾತ್ರಿ ಏಕಹಾ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಮಹಾಪೂಜೆ ನಡೆಯಿತು. ನ. 13ರಂದು ರಾತ್ರಿ ದೇವರು ತುಳಸೀಕಟ್ಟೆಯಲ್ಲಿ ಆಸೀನರಾಗಿ ತುಳಸಿ ಪೂಜೆ, ಉತ್ಥಾನ ದ್ವಾದಶಿ, ಪಲ್ಲಕ್ಕಿ ಉತ್ಸವ, ವಸಂತೋತ್ಸವ ನಡೆಯಿತು. ನ. 14 ರಂದು ರಾತ್ರಿ ಪಲ್ಲಕ್ಕಿ ಉತ್ಸವ, ವಸಂತೋತ್ಸವ, ಕಾರ್ತಿಕ ಮಂಗಲ ತ್ರಯೋದಶಿ ಉತ್ಸವ, ವೈಕುಂಠ ಚತುರ್ದಶಿ ಉತ್ಸವ ನಡೆಯಿತು. ನ. 15ರಂದು ಕಾರ್ತಿಕ ಪೌರ್ಣಮಿ ಲಕ್ಷದೀಪ, ಬೆಳಿಗ್ಗೆ ಪ್ರಾರ್ಥನೆ, ದೇವರು ವನಕ್ಕೆ ಚಿತ್ತೈಸುವುದು, ಧಾತ್ರಿ ಹೋಮ, ವನಭೋಜನ, ಸಂಜೆ ಲಾಲ್ಕಿ ಉತ್ಸವ, ಕಟ್ಟೆಪೂಜೆ, ಪಲ್ಲಕ್ಕಿ ಉತ್ಸವ, ವಸಂತೋತ್ಸವ ನಡೆಯಿತು.
ನ. 16ರಂದು ಬೆಳಿಗ್ಗೆ ಅವಭೃತೋತ್ಸವ, ಅವಭೃತ ಸ್ನಾನ, ದ್ವಾದಶ ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ಭೂರಿಭೋಜನದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.