ಗುತ್ತಿಗಾರು ಪ್ರಾ. ಕೃ. ಪ.ಸ. ಸಂಘದ ಶತಮಾನೋತ್ಸವ ಪ್ರಯುಕ್ತ

0

ಗುತ್ತಿಗಾರಿನಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ಆರಂಭ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಮತ್ತು
ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ, ದೇರಳಕಟ್ಟೆ-ಮಂಗಳೂರು
ಇವರ ಸಹಭಾಗಿತ್ವದಲ್ಲಿ ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವದ ಅಂಗವಾಗಿ
ಬೃಹತ್ ಉಚಿತ ವೈದ್ಯಕೀಯ ಶಿಬಿರ ನ.17 ರಂದು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೀನ್ ದಯಾಳ್ ರೈತ ಸಭಾಂಗಣದಲ್ಲಿ ಇಂದು ಆರಂಭಗೊಂಡಿತು.

ಸಹಕಾರಿ ಸಂಘದ ವೆಂಕಟ್ ದಂಬೆಕೋಡಿ ಅಧ್ಯಕ್ಷತೆ ಮಾತನಾಡಿ ಶತಮಾನೋತ್ಸವ ಪ್ರಯುಕ್ತ ಈ ಕಾರ್ಯಕ್ರಮ ಮಾಡಿದ್ದು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು, ಪ್ರತಿಯೊಬ್ಬರ ಆರೋಗ್ಯ ಸುಧಾರಿಸಲಿ ಆ ಮೂಲಕ ಇಂತಹ ವೈದ್ಯಕೀಯ ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು . ಉದ್ಯಮಿ ಉಮೇಶ್ ಮುಂಡೋಡಿ ಕಾರ್ಯಕ್ರಮ ಉದ್ಘಾಟಿಸಿದರು.

ಶ್ರೀ ಕೃಷ್ಣ ಕ್ಲಿನಿಕ್ ಗುತ್ತಿಗಾರಿನ
ಡಾ. ಮಹಾಲಿಂಗೇಶ್ವರ ಭಟ್ ದೇವಶ್ಯ, ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಡಾ‌ ಸಾಯಿಪ್ರದೀಪ್ ಅತಿಥಿಗಳಾಗಿದ್ದರು, ಸಂಘದ ಉಪಾಧ್ಯಕ್ಷರಾದ ಕಿಶೋರ್ ಕುಮಾರ್ ಎ.ಎನ್, ಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ, ವೇದಿಕೆಯಲ್ಲಿದ್ದರು.

ಕರುಣಾಕರ ಸಾಲ್ತಾಡಿ ಪ್ರಾರ್ಥಿಸಿದರು. ನಿರ್ದೇಶಕರಾದ ನವೀನ್ ಬಾಳುಗೋಡು ಸ್ವಾಗತಿಸಿದರು. ಶರತ್ ಎ.ಕೆ ವಂದಿಸಿದರು. ಕಿಶೋರ್ ಕುಮಾರ್ ಪೈಕ ಬೊಮ್ಮದೇರೆ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಮಕ್ಕಳ ತಪಾಸಣೆ ,ಸಾಮಾನ್ಯ ರೋಗ ತಪಾಸಣೆ,ಮಧುಮೇಹ ಪರೀಕ್ಷೆ
ಕಿವಿ,ಮೂಗು, ಗಂಟಲು ತಪಾಸಣೆ,
ರಕ್ತದೊತ್ತಡ ಪರೀಕ್ಷೆ, ಎಲುಬು ಮತ್ತೆ ಕೀಲು ತಪಾಸಣೆ,
ಔಷಧ ವಿತರಣೆ ಮತ್ತು ಅಗತ್ಯವಿರುವವರಿಗೆ E.C.G, ಚರ್ಮರೋಗ ತಪಾಸಣೆ ಸೌಲಭ್ಯ ಇರಲಿದೆ.