ಸುಳ್ಯದ ಕೆವಿಜಿ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನ. 15ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯಕೃಷ್ಣ ವಹಿಸಿದ್ದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಹೇಮನಾಥ್ ಕೆ.ವಿ, ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ.ವಿ. ದಾಮೋದರ ಗೌಡ, ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಟೀನಾ ಹೆಚ್.ಎಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವಿತ್ ಕೆ.ಪಿ, ಉಪಾಧ್ಯಕ್ಷ ಮುಶ್ರಫ್ ಅಹಮ್ಮದ್, ಕಾರ್ಯದರ್ಶಿ ಮಾನಸ, ಜೊತೆ ಕಾರ್ಯದರ್ಶಿ ಸುಶ್ಮಾಂಜಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕು. ರಮ್ಯ ಪ್ರಾರ್ಥಿಸಿದರು. ಮಾನಸ ಸ್ವಾಗತಿಸಿ, ಸುಶ್ಮಾಂಜಲಿ ವಂದಿಸಿದರು. ಕು. ನಂದನ ಕಾರ್ಯಕ್ರಮ ನಿರೂಪಿಸಿದರು.