ಡಿ. 23ರಿಂದ ಡಿ. 27: ಬಳ್ಪ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ, ಆಮಂತ್ರಣ ಪತ್ರ, ಕ್ಯಾಲೆಂಡರ್ ಬಿಡುಗಡೆ

0


ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಗಳು ಡಿ. 23ರಿಂದ ಡಿ. 27ರ ತನಕ ನಡೆಯಲಿದ್ದು, ಆಮಂತ್ರಣ ಪತ್ರ ಮತ್ತು ಕ್ಯಾಲೆಂಡರ್ ಬಿಡುಗಡೆ ನ. 18ರಂದು ನಡೆಯಿತು.




ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರೂ, ಪ್ರಧಾನ ಅರ್ಚಕರೂ ಆದ ಶ್ರೀವತ್ಸ ಎಂ.ವಿ ದೇವತಾ ಪ್ರಾರ್ಥನೆ ಮತ್ತು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ನ್ಯಾಯವಾದಿ ಹಾಗೂ ನೋಟರಿ ಪುರುಷೋತ್ತಮ ಮಲ್ಕಜೆ ಮತ್ತು ಶ್ರೀಮತಿ ಉಷಾ ಪುರುಷೋತ್ತಮ್ ಆಮಂತ್ರಣ ಪತ್ರ ಮತ್ತು ಶ್ರೀಮತಿ ವಸಂತಿ ಮತ್ತು ನಾರಾಯಣ ಮಣಿಯಾಣಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು.





ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಕೋಶಾಧಿಕಾರಿ ನಾಗೇಶ್ ಪಡಿಕ್ಕಿಲಾಯ, ಪ್ರಧಾನ ಸಂಚಾಲಕರಾದ ಮೀವಾನಿಗುತ್ತು ಸದಾನಂದ ರೈ ಅರ್ಗುಡಿ, ಮುರಳಿ ಕಾಮತ್ ಬಳ್ಪ, ಸಂಘಟನಾ ಕಾರ್ಯದರ್ಶಿಗಳಾದ ರೋಹಿತಾಶ್ವ ಕೊಠಾರಿ, ರಾಧಾಕೃಷ್ಣ ನಾದೂರು, ಕಾರ್ಯಾಧ್ಯಕ್ಷರಾದ ಅರುಣ್ ರೈ ಗೆಜ್ಜೆ, ಪುಟ್ಟಣ್ಣ ದೊಡ್ಡಮನೆ, ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಶ್ರೀಮತಿ ನಯನ ಅಗಳ್ತ, ಅಧ್ಯಕ್ಷೆ ಅಧ್ಯಕ್ಷೆ ಶ್ರೀಮತಿ ತುಳಸಿ ನಾಗೇಶ್ ಪಡಿಕ್ಕಿಲಾಯ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ತ್ರಿವೇಣಿ ಕೊರಗಪ್ಪ ದೊಡ್ಡಮನೆ, ಪ್ರಮುಖರಾದ ಶೂರಪ್ಪ ಗೌಡ ಪಂಡಿ, ಸದಾನಂದ ಕಾರ್ಜ, ಪದ್ಮನಾಭ ಜತ್ತಿಲ ಬೆಂಗಳೂರು, ಚಂದ್ರಕಾಂತ ಎಂ.ಎಂ, ಕೇಶವ ಗೌಡ ಕರ್ಜ, ಅರ್ಚಕರಾದ ಜಗಜೀವನ್ ರೆಂಜಾಲ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಬೈಲುವಾರು ಸಮಿತಿಗಳ ಸಂಚಾಲಕರು, ಸದಸ್ಯರು ಸೇರಿದಂತೆ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಿ. 8ರಂದು ಆಮಂತ್ರಣ ಪತ್ರ ಅಭಿಯಾನ ನಡೆಯಲಿದ್ದು, ಗ್ರಾಮಸ್ಥರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕಿನ ವಿವಿಧ ಗ್ರಾಮಗಳ ಮನೆಗಳಿಗೆ, ಸಂಸ್ಥೆಗಳಿಗೆ ಆಮಂತ್ರಣ ಪತ್ರ ಹಂಚಲಿದ್ದಾರೆ. ಡಿ. 20ರಂದು ಚಪ್ಪರ ಮುಹೂರ್ತ ನಡೆಯಲಿದ್ದು, ಚೆನ್ನಪ್ಪ ಗೌಡ ಪಟೋಳಿ ಉದ್ಘಾಟಿಸಲಿದ್ದಾರೆ. ಡಿ. 22ರಂದು ಉಗ್ರಾಣ ಮುಹೂರ್ತ ನಡೆಯುವುದರೊಂದಿಗೆ ಜಾತ್ರೋತ್ಸವವಕ್ಕೆ ಚಾಲನೆ ದೊರೆಯಲಿದೆ. ಡಿ. 23, 24 ಮತ್ತು 25ರಂದು ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ಡಿ. 26ರಂದು ರಾತ್ರಿ ವಿಜೃಂಭಣೆಯ ರಥೋತ್ಸವ, ಬಳ್ಪ ಬೆಡಿ ನಡೆಯಲಿದೆ. ಡಿ. 27ರಂದು ಅವಭೃತೋತ್ಸವದೊಂದಿಗೆ ಜಾತ್ರೋತ್ಸವ ಸಮಾಪನಗೊಳ್ಳಲಿದೆ.