ನಗರ ಪಂಚಾಯತ್ ಕಚೇರಿ ಅವರಣದಲ್ಲೂ 19 ಕ್ಕೂ ಹೆಚ್ಚು ಬೀದಿ ನಾಯಿಗಳ ಓಡಾಟ
ಮನವಿ ನೀಡದೆ ವಾಪಾಸಾದ ಸಾರ್ವಜನಿಕ
ಶಾಂತಿನಗರ ಪರಿಸರದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಬೀದಿನಾಯಿಗಳ ಕಾಟದಿಂದ ಸ್ಥಳೀಯ ಜನರು ಬೇಸತ್ತು ಹೋಗಿದ್ದಾರೆ.
ಇತ್ತೀಚೆಗೆ ಪರಿಸರದ 3, 4 ಮಂದಿಗೆ ನಾಯಿಗಳು ಕಚ್ಚಿ ಇಂದಿಗೂ ಸುಳ್ಯ ಸರ್ಕಾರಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮನವಿ ನೀಡಲು ನಗರ ಪಂಚಾಯಿತಿಗೆ ಸ್ಥಳೀಯರೊಬ್ಬರು ನ 20 ರಂದು ತೆರಳಿದ್ದು ಈ ಸಂಧರ್ಭ ನಗರ ಪಂಚಾಯತಿ ಆವರಣದಲ್ಲಿಯೇ 19 ಕ್ಕೂ ನಾಯಿಗಳ ಬೀಡನ್ನು ಕಂಡು ಅರ್ಜಿ ನೀಡಲು ಹೋದ ಸಾರ್ವಜನಿಕ ಮರಳಿ ಬಂದ ಘಟನೆ ನಡೆದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.