ಸುಳ್ಯ ನಗರ ಪಂಚಾಯತ್ ಇಂಜಿನಿಯರ್ ಆಗಿ ಶಿವಕುಮಾರ್ ರಿಗೆ ಪ್ರಭಾರ ವಹಿಸಲಾಗಿದ್ದು, ಅವರು ಈ ವಾರದಲ್ಲಿ ಸುಳ್ಯಕ್ಕೆ ಬಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಈ ಹಿಂದೆ ಸುಳ್ಯದಲ್ಲಿ ಇಂಜಿನಿಯರ್ ಆಗಿದ್ದ ಶಿವಕುಮಾರ್ ರವರು ಮೈಸೂರಿಗೆ ವರ್ಗಾವಣೆಗೊಂಡಿದ್ದರು. ಎರಡು ತಿಂಗಳ ಹಿಂದೆ ಮೈಸೂರಿನಿಂದ ಕಡಬ ನಗರ ಸಭೆ ಇಂಜಿನಿಯರ್ ಆಗಿ ವರ್ಗಾವಣೆಗೊಂಡು ಬಂದಿದ್ದರು. ಇದೀಗ ಅವರಿಗೆ ಸುಳ್ಯ ನಗರ ಪಂಚಾಯತ್ ನ ಪ್ರಭಾರ ವಹಿಸಿರುವುದಾಗಿ ತಿಳಿದುಬಂದಿದೆ.