ರಾಷ್ಟ್ರಧ್ವಜ ಗೌರವಯಾತ್ರೆ ಸಮಾರೋಪ
ನಮ್ಮ ದೇಶದಲ್ಲಿ ಸಂವಿಧಾನ ಎಂಬುವುದು ಇಲ್ಲದೇ ಇದ್ದಿದ್ದರೆ ಈ ದೇಶದಲ್ಲಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಸಂವಿಧಾನ ರಚನೆ ಆಗುವ ಮೊದಲು ಈ ದೇಶವು ನಮ್ಮದು ಎಂದು ಹೇಳಲು ಆಗುತ್ತಿರಲಿಲ್ಲ,ಕಾರಣ ಅಂದು ದೇಶವನ್ನು ಆಳುತ್ತಿದ್ದ ರಾಜರ ದೇಶವಾಗಿ ಭಾರತವು ಮಾರ್ಪಟ್ಟಿತು. ಯಾವ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿದರು ಅಂದಿನಿಂದ ಈ ಭಾರತ ದೇಶವು ಪ್ರತಿಯೊಬ್ಬ ಪ್ರಜೆಯ ದೇಶವಾಗಿ ಮಾರ್ಪಟ್ಟಿತು. ಅಂತಹ ಸಂವಿಧಾನವನ್ನು ಉಳಿಸುವುದು ಮತ್ತು ಬೆಳೆಸುವುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಖ್ಯಾತ ವಾಗ್ಮಿ, ನಿಕೇತ್ ರಾಜ್ ಮೌರ್ಯ ಹೇಳಿದರು.
ಪ್ರಜಾಧ್ವನಿ ಕರ್ನಾಟಕ ಇದರ ವತಿಯಿಂದ ನ 27 ರಂದು ಸುಳ್ಯದಲ್ಲಿ ನಡೆದ ಸಂವಿಧಾನ ಸ್ಮರಣೆಗಾಗಿ ರಾಷ್ಟ್ರಧ್ವಜ ಗೌರವಯಾತ್ರೆ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಗಾರರಾಗಿ ಅವರು ಮಾತನಾಡಿ ‘ನಮ್ಮ ದೇಶದಲ್ಲಿ ಯಾವುದೇ ಧರ್ಮದವರ ಧಾರ್ಮಿಕ ಕೇಂದ್ರಕ್ಕೆ ಇನ್ನೊಂದು ಧರ್ಮದವರಿಂದ ತೊಂದರೆಯಾದರೆ ಕತ್ತಿ ದೊಣ್ಣೆ ಹಿಡಿದು ಪ್ರತಿಭಟಿಸಲು ಮುಂದಾಗುತ್ತೇವೆ.ಆದರೆ ನಮ್ಮ ಸಂವಿಧಾನಕ್ಕೆ ತೊಂದರೆ ಆಗುತ್ತಿದೆ ಎಂದರೆ ಯಾರು ಕೂಡ ಪ್ರತಿರೋಧ ತೋರಲು ಮುಂದಾಗುದಿಲ್ಲ. ಅವರರವರ ಧರ್ಮ ಗ್ರಂಥ ಗಳಿಗಿಂತ ನಮ್ಮ ಸಂವಿಧಾನ ಗ್ರಂಥ ದೊಡ್ಡದು ಎಂಬ ಚಿಂತನೆ ಬರುವುದು ಬಹಳ ವಿರಳವಾಗಿದೆ. ಇದಕ್ಕೆ ಮೂಲ ಕಾರಣ ನಾವು ಪೋಷಕರು ನಮ್ಮ ಮಕ್ಕಳಿಗೆ ಸಂವಿಧಾನದ ಮಹತ್ವದ ಬಗ್ಗೆ ಹೇಳಿಕೊಡುವುದಕ್ಕಿಂತ ನಮ್ಮ ನಮ್ಮ ಧರ್ಮದ ಬಗ್ಗೆಯೇ ಹೆಚ್ಚು ಹೇಳಿ ಕೊಡುವ ರೂಢಿಯನ್ನು ನಾವೆಲ್ಲರೂ ಬೆಳೆಸಿಕ್ಕೊಂಡಿರುವ ಕಾರಣ ಎಂದರು.ಇದು ಅಪಾಯಕಾರಿ ಇದರಿಂದ ನಮ್ಮ ಸಂವಿಧಾನ ಉಳಿಯಲು ಸಾಧ್ಯವಿಲ್ಲ. ಅದು ಉಳಿಯದಿದ್ದರೆ ನಾವು ಯಾರು ಕೂಡ ಈ ದೇಶದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದರು.
ಸಂವಿಧಾನ ಚಲಾಯಿಸುವ ವ್ಯಕ್ತಿಗಳು ಯೋಗ್ಯರು ಮತ್ತು ಪ್ರಬುದ್ಧರು ಆಗಿರಬೇಕು. ಸಂವಿಧಾನ ಬೆಂಕಿ ಇದ್ದಂತೆ ಅದು ಒಳ್ಳೆಯದ್ದಕ್ಕೆ ಒಳ್ಳೆಯದು ಅದೇ ರೀತಿ ಕೆಟ್ಟದ್ದಕ್ಕೆ ಅದು ಕೆಟ್ಟದ್ದೆ. ಅದನ್ನು ಉಪಯೋಗಿಸುವ ರೀತಿ ಮತ್ತು ವ್ಯಕ್ತಿಗಳಲ್ಲಿ ಅದರ ಗುಣ ನಿಂತಿರುತ್ತೆ.ಯೋಗ್ಯರು ಅದನ್ನು ಅಣತೆ ಯಾಗಿ ಮತ್ತು ತಾಯಿ ಮಕ್ಕಳಿಗೆ ಹೊಟ್ಟೆ ತುಂಬಿಸಲು ಆಹಾರ ಬೇಯಿಸುವ ವಸ್ತುವಾಗಿ ಬಳಸಿಕ್ಕೊಂಡರೆ ಅಯೋಗ್ಯರು, ದುಷ್ಟರು ಅದನ್ನು ಸಮಾಜಕ್ಕೆ ಬೆಂಕಿ ಕೊಡಲು, ವಿನಾಶ ಮಾಡಲು ಬಳಸಿಕೊಳ್ಳುತ್ತಾರೆ.
ಆದ್ದರಿಂದ ಯಾರ ಕೈಯಲ್ಲಿ ದೇಶ ಕೊಡಬೇಕು ಎಂಬುವುದನ್ನು ನಾವು ಯೋಚಿಸಬೇಕಾಗಿದೆ.ಅದು ಪಕ್ಷ ಯಾವುದೇ ಆಗಿರಲಿ ಆ ವ್ಯಕ್ತಿಯಲ್ಲಿ ಸಂವಿಧಾನದ ಅರಿವು ಮತ್ತು ಉತ್ತಮ ಚಿಂತನೆ ಕಡ್ಡಾಯವಾಗಿ ಇರಬೇಕಾಗಿದೆ.ಆಗಿದ್ದಲ್ಲಿ ದೇಶ ಮತ್ತು ಸಂವಿಧಾನ ಎರಡೂ ಉಳಿಯಲು ಸಾಧ್ಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್ ಮುಖ್ಯಧಿಕಾರಿ ಸುಧಾಕರ್ ವಹಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಸಾಮಾಜಿಕ ಕಾರ್ಯಕರ್ತ ಇನಾಯತ್ ಅಲಿ ಮಾತನಾಡಿ ನಮ್ಮ ದೇಶದ ಸಂವಿಧಾನ ನಮಗಿರುವ ನಿಧಿ ಯಾಗಿದೆ. ಇದನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅದಕ್ಕಾಗಿ ನಾವೆಲ್ಲರೂ ಕಟಿಬದ್ದರಾಗ ಬೇಕೆಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಪುತ್ತೂರು ಸಹಾಯ ಆಯುಕ್ತರು ಕಳುಹಿಸಿದ ಸಂವಿಧಾನದ ಆಶಯದ ಆಡಿಯೋ ಸಂದೇಶವನ್ನು ಸಭೆಗೆ ಕೇಳಿಸಿದರು.
ಪ್ರಜಾದ್ವನಿ ಸಂಚಾಲಕ ಗೋಪಾಲ ಪೆರಾಜೆ ಪ್ರಾಸ್ತವಿಕ ಮಾತನಾಡಿ ಸಂವಿಧಾನದ ಜಾಗೃತಿ ಮೂಡಿಸಲು ಸುಳ್ಯದಲ್ಲಿ ಸಮಾನ ಮನಸ್ಕರ ಬಳಗವನ್ನು ರೂಪಿಸಿ ಆರಂಭಿಕ ಪಡೆದ ಈ ಸಂಘಟನೆ ಇದೀಗ ಪ್ರಜಾ ದ್ವನಿಯಾಗಿ ರೂಪು ಗೊಂಡಿದೆ. ಸಂವಿಧಾನದ ಅರಿವು ಮೂಡಿಸುವುದು ಮಾತ್ರ ನಮ್ಮ ಉದ್ದೇಶ. ಆದ್ದರಿಂದ ಇದಕ್ಕೆ ಪಕ್ಷಗಳ ಮಾತಿಲ್ಲ. ಸಮಾನ ಮನಸ್ಕರಾದ ಎಲ್ಲರಿಗೂ ಸ್ವಾಗತವಿದೆ ಎಂದರು. ಇಲ್ಲಿ ಜಾತಿ ಧರ್ಮ ಎಂಬ ಭೇದ ಭಾವ ವಿಲ್ಲ. ಸಂವಿಧಾನವೇ ನಮ್ಮ ಧರ್ಮ ಎಂದರು.
ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ಧರ್ಮ ಗುರುಗಳಾದ ಸಯ್ಯಿದ್ ತ್ವಾಹಿರ್ ಸಅದಿ ಬಾ ಅಲವಿ ತಂಗಳ್, ಸುಳ್ಯ ಸೈಂಟ್ ಬ್ರಿಜೆಟ್ಸ್ ಚರ್ಚ್ ನ ಫಾದರ್ ವಿಕ್ಟರ್ ಡಿ ಸೋಜಾ,ಪ್ರಜಾದ್ವನಿ ಕಡಬ ಸಂಚಾಲಕ ಟಿ ಜಿ ಮೇತ್ಯು, ನಿವೃತ ಸೈನಿಕರ ಸಂಫದ ಜಿಲ್ಲಾ ಅಧ್ಯಕ್ಷ ಜೆ ಪಿ ಎಂ ಚೆರಿಯನ್,ವೀರನಾರಿ ಸಂಘದ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಗೀತಾ ಉಪಸ್ಥಿತರಿದ್ದರು.
ಸುಳ್ಯಕ್ಕೆ ಬಂದ ಗೌರವ ಯಾತ್ರೆ ಗಾಂಧಿನಗರ ದ ವರೆಗೆ ಮೆರವಣಿಗೆ ಮೂಲಕ ತೆರಳಿ ಮುಖಂಡರುಗಳು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪನಮನ ಸಲ್ಲಿಸಿದರು.
ಸಂಜೆ ಸುಳ್ಯಕ್ಕೆ ಪ್ರವೇಶ ಪಡೆದ ಯಾತ್ರೆ ಪೈಚಾರು ಜಕ್ಸನ್ ಬಳಿ ಹಾಗೂ ಜ್ಯೋತಿ ವೃತ್ತದ ಬಳಿ ಅಲ್ಪ ಸಮಯ ನಿಂತು ಮೆರವಣಿಗೆಯ ವಾಹನದಲ್ಲಿದ್ದ ರಾಷ್ಟ್ರ ದ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಭೋದನೆ ಕಾರ್ಯಕ್ರಮ ನಡೆಯಿತು.
ಪ್ರಜಾದ್ವನಿ ಸಂಘದ ಸದಸ್ಯರುಗಳಾದ ಅಶೋಕ್ ಎಡಮಲೆ ಸ್ವಾಗತಿಸಿ ಉಮ್ಮರ್ ಕೆ ಎಸ್ ವಂದಿಸಿ ಟಿ ಐ ಲೂಕಾಸ್ ಹಾಗೂ ಕಾಂತಿ ಕಲ್ಲುಗುಂಡಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂಧರ್ಭದಲ್ಲಿ ಪ್ರಜಾದ್ವನಿ ಸಂಘಟನೆಯ ಸದಸ್ಯರುಗಳಾದ ಕೆ. ಪಿ ಜೋನಿ ಕಲ್ಲುಗುಂಡಿ, ವಸಂತ ಪೆಲ್ತಡ್ಕ,ಅಶ್ರಫ್ ಸಾಹುಕಾರ್, ಪ್ರವೀಣ್ ಮುಂಡೋಡಿ, ಮಂಜುನಾಥ್ ಮಡ್ತಿಲ, ಮಹೇಶ್ ಬೆಳ್ಳಾರ್ಕರ್, ಕರುಣಾಕರ ಪಲ್ಲತಡ್ಕ,ಮುಖಂಡರುಗಳಾಭರತ್ ಮುಂಡೋಡಿ, ಪಿ ಸಿ ಜಯರಾಮ್, ಪಿ ಎಸ್ ಗಂಗಾಧರ್, ಸುರೇಶ್ ಅಮೈ,ಪಿ ಎ ಮಹಮ್ಮದ್, ಕೆ ಎಂ ಮುಸ್ತಫಾ ಜನತಾ, ರಾಧಾಕೃಷ್ಣ ಬೊಳ್ಳೂರು, ಕೆ ಗೋಕುಲ್ ದಾಸ್,ಮಹಮ್ಮದ್ ಕುಂಞಿ ಗೂನಡ್ಕ,ಶೌವಾದ್ ಗೂನಡ್ಕ,ಗೀತಾ ಕೊಲ್ಚಾರ್, ಸುಜಯ್ ಕೃಷ್ಣ,ರಾಜು ಪಂಡಿತ್, ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೊ,ಶಾಫಿ ಕುತ್ತಮೊಟ್ಟೆ,ಭರತ್ ಕುಕ್ಕುಜಡ್ಕ, ನಂದ ರಾಜ್ ಸಂಕೇಶ್, ಲಕ್ಷ್ಮಿಶ ಗಬಲಡ್ಕ, ಬೆಟ್ಟ ಜಯರಾಮ್ ಭಟ್, ಬೆಟ್ಟ ರಾಜರಾಮ್ ಭಟ್, ಧನುಷ್ ಕುಕ್ಕೆಟ್ಟಿ, ಇಬ್ರಾಹಿಂ ಎ ಕೆ ಕಲ್ಲುಗುಂಡಿ, ಶಶಿಧರ ಎಂ ಜೆ, ಭವಾನಿ ಶಂಕರ್ ಕಲ್ಮಡ್ಕ,ಧೀರಾ ಕ್ರಾಸ್ತ, ದಿನೇಶ್ ಅಂಬೆಕಲ್ಲು ಮೊದಲಾದವರು ಭಾಗವಹಿಸಿದ್ದರು.