ನೆಲ್ಲೂರು ಕೆಮ್ರಾಜೆ ಗ್ರಾಮದ ದೊಡ್ಡತೋಟ ಮತ್ತು ಮರ್ಕಂಜ ಸಂಚರಿಸುವ ಚೆನ್ನಡ್ಕ ಎಂಬಲ್ಲಿ ರಸ್ತೆಯ ಬದಿ ಬೆಳೆದು ನಿಂತ ಅಪಾಯಕಾರಿ ಮಾವಿನ ಮರವಿದ್ದು, ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಸಿಡಿಲು ಬಡಿದು ಮರದ ಮಧ್ಯಭಾಗ ಸೀಳಿರುತ್ತದೆ.
ಈ ಮರವು ಸಾರ್ವಜನಿಕ ರಸ್ತೆಯ ಬದಿಯಲ್ಲಿರುವುದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು, ಶಾಲಾ ಕಾಲೇಜುಗಳ ವಾಹನಗಳು ಹಾಗೂ ವಿದ್ಯಾರ್ಥಿಗಳು ಸಂಚರಿಸುವುದರಿಂದ ಈ ಮರವು ಅಪಾಯದ ಹಂತಕ್ಕೆ ತಲುಪಿರುತ್ತದೆ.
ಹಾಗಾಗಿ ಸಾರ್ವಜನಿಕ ಹಿತ ದೃಷ್ಟಿಯಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮರವನ್ನು ಬುಡ ಸಹಿತ ತೆರವುಗೊಳಿಸಬೇಕಾಗಿ ಸ್ಥಳೀಯರು ಮನವಿ ಮಾಡಿದ್ದಾರೆ.