ದೊಡ್ಡತೋಟ-ಮರ್ಕಂಜ ರಸ್ತೆಯ ಚೆನ್ನಡ್ಕ ಎಂಬಲ್ಲಿ ಜೆಸಿಬಿಯ ಮೂಲಕ ರಸ್ತೆ ತಾತ್ಕಲಿಕ ದುರಸ್ಥಿ

0

ಸಂಚರಿಸಲು ಅಸಾಧ್ಯವಾದ ಜಾಗದ ದುರಸ್ಥಿ ಮಾಡಿರುವುದಕ್ಕೆ‌ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾದ ಜೆಸಿಬಿ ಮಾಲಕ

ದೊಡ್ಡತೋಟ – ಹೈದಂಗೂರು ರಸ್ತೆಯ ಚೆನ್ನಡ್ಕ ಎಂಬಲ್ಲಿ ರಸ್ತೆ ತುಂಬಾ ಹಾಳಾಗಿದ್ದ ರಸ್ತೆಯನ್ನು ಜೆಸಿಬಿಯ ಮೂಲಕ ತಾತ್ಕಾಲಿಕ ದುರಸ್ಥಿಪಡಿಸಿದ ಘಟನೆಯೊಂದು ಇದೀಗ ವರದಿಯಾಗಿದೆ.

ದೊಡ್ಡತೋಟದಿಂದ ಮರ್ಕಂಜ ಕ್ಕೆ ಹೋಗುವ ರಸ್ತೆಯ ಹೈದಂಗೂರುವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಚೆನ್ನಡ್ಕ ಎಂಬಲ್ಲಿ ಸಂಪೂರ್ಣ ಹೊಂಡಗಳಿಂದ ತುಂಬಿ ಹೋಗುವುದೇ ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿತ್ತು. ಕೆಲ ದಿನದ ಹಿಂದೆ ಇದೇ ಸ್ಥಳದಲ್ಲಿ ರಸ್ತೆಯ ಹೊಂಡಕ್ಕೆ ತೆಂಗಿನ ಸಸಿ ನೆಟ್ಟು ಪ್ರತಿಭಟಿಸಿದ್ದರು. ಮಾದ್ಯಮದಲ್ಲಿಯೂ ವರದಿ ಪ್ರಕಟಗೊಂಡಿತ್ತು. ಹಾಗಿದ್ದರೂ ಆಡಳಿತ ಮಾತ್ರ ತನಗೇನು ಗೊತ್ತೆ ಇಲ್ಲದಂತೆ ಮುಖ ಮುಚ್ಚಿ ಕುಳಿತಿತ್ತು.

ತಾತ್ಕಾಲಿಕ ದುರಸ್ಥಿಯ ಗೋಜಿಗೂ ಹೋಗಲಿಲ್ಲ. ಇಂದು ಚೆನ್ನಡ್ಕದ ಜನಾರ್ಧನ ಎಂಬವರು ತಮ್ಮ ಜೆಸಿಬಿಯ ಮೂಲಕ ಹದಗೆಟ್ಟಿದ ರಸ್ತೆಯನ್ನು ತಾತ್ಕಾಲಿಕ ದುರಸ್ಥಿ ಮಾಡಿದರು. ಜನಾರ್ಧನರವರ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು.