ದೀಪಾವಳಿ ವಿಶೇಷಾಂಕದ ಮುದ್ದು ಕಂದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

0


ಈ ಬಾರಿಯ ದೀಪಾವಳಿ ವಿಶೇಷಾಂಕದ ಮುದ್ದು ಕಂದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಇಂದು ಸುದ್ದಿ ಚಾನೆಲ್‌ನಲ್ಲಿ ನಡೆಯಿತು. ಸುದ್ದಿ ವರದಿಗಾರ ಶರೀಫ್ ಜಟ್ಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದ್ದಿ ಬಿಡುಗಡೆಯ ಸಂಪಾದಕ ಹರೀಶ್ ಬಂಟ್ವಾಳ್, ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ, ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ, ಜಾಹೀರಾತು ವಿಭಾಗದ ಮುಖ್ಯಸ್ಥ ರಮೇಶ್ ನೀರಬಿದಿರೆ, ಪ್ರಸರಣಾಧಿಕರಿ ಗಣೇಶ್ ಕುಕ್ಕುದಡಿ, ಸೇರಿದಂತೆ ಸುದ್ದಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು. ಜಯಶ್ರೀ ಹಳೆಗೇಟು ಬಹುಮಾನಿತರ ಪಟ್ಟಿ ವಾಚಿಸಿದರು.
ಪ್ರಥಮ ಸ್ಥಾನ ಪಡೆದ ಸಂಪಾಜೆ ಗ್ರಾಮದ ಕೈಪಡ್ಕ ಪುರುಷೋತ್ತಮ ಹೆಚ್.ಎಸ್ ಮತ್ತು ಶ್ರೀಮತಿ ಸವಿತಾ ಜಿ ದಂಪತಿಗಳ ಪುತ್ರ ಪ್ರಜ್ಞಾನ್ ಪಿ.ಗೌಡ, ದ್ವಿತೀಯ ಸ್ಥಾನ ಪಡೆದ ಆಲೆಟ್ಟಿ ಗ್ರಾಮದ ಮೊರಂಗಲ್ಲು ವಿಜಯಕುಮಾರ್ ಮತ್ತು ಶ್ರೀಮತಿ ಅಂಜಲಿ ಬಿ.ಎನ್ ದಂಪತಿಗಳ ಪುತ್ರ ಅದ್ವಿಕ್ ವಿ. ರವರಿಗೆ, ಹಾಗೂ ತೃತೀಯ ಸ್ಥಾನ ಪಡೆದ
ಅಮರಮುಡ್ನೂರು ಗ್ರಾಮದ ತೊತ್ಯಾನ ಮಿಥುನ್ ಟಿ.ಎಸ್ ಮತ್ತು ಶ್ರೀಮತಿ ರಮ್ಯ ಕೆ.ವಿ. ದಂಪತಿಗಳ ಪುತ್ರ ತ್ರಿದೇವ್ ಸೋಮಣ್ಣ ಟಿ.ಎಂ.ರಿಗೆ ಬಹುಮಾನ ವಿತರಿಸಲಾಯಿತು.

ಅಂತಿಮ ಸುತ್ತಿಗೆ ಬಂದ ನೆಲ್ಲೂರು ಕೆಮ್ರಾಜೆ ಗ್ರಾಮದ ಹರ್ಲಡ್ಕ ರವಿಕಿರಣ್ ಹೆಚ್ ಮತ್ತು ಶ್ರೀಮತಿ ಶಾಲಿನಿ ಕೆ.ದಂಪತಿಗಳ ಪುತ್ರಿ ಧೃತಿ ಹೆಚ್.ಆರ್,,ಮಡಪ್ಪಾಡಿ ಗ್ರಾಮದ ಗಟ್ಟಿಗಾರು ಯತೀಶ್ ಜಿ.ಎಂ ಮತ್ತು ಶ್ರೀಮತಿ ಮಣಿಶ್ರೀ ಪಿ.ಎಸ್ ದಂಪತಿಗಳ ಪುತ್ರ ಗನ್ವಿತ್ ಜಿ.ವೈ, ನಡುಗಲ್ಲು ಗ್ರಾಮದ ನಾಲ್ಕೂರು ಮದನ್ ಕೆ.ಡಿ.ಮತ್ತು ಶ್ರೀಮತಿ ಮನಸ್ವಿ ಜಿ.ವಿ ದಂಪತಿಗಳ ಪುತ್ರಿ ಕಶ್ವಿ, ನೆಲ್ಲೂರು ಕೆಮ್ರಾಜೆ ಗ್ರಾಮದ ಪುನ್ಕುಟ್ಟಿ ಮುರಳೀಧರ ಪಿ.ಜೆ ಮತ್ತು ಶ್ರೀಮತಿ ಸಂಧ್ಯಾ ಕೆ.ಎಲ್ ದಂಪತಿಗಳ ಪುತ್ರಿ ಅನ್ವಿಶಾ ಪಿ.ಎಂ., ಅಮರಮುಡ್ನೂರು ಗ್ರಾಮದ ಕುಡುಂಬಿಲ ರವಿಶಂಕರ ಕೆ. ಮತ್ತು ಶ್ರೀಮತಿ ಸ್ತ್ರೀಶ ಕೆ.ಎಸ್ ದಂಪತಿಗಳ ಪುತ್ರ ಅಯಾನ್ಶ್ ಕೆ.ಆರ್., ಐವರ್ನಾಡು ಗ್ರಾಮದ ದೇರಾಜೆ ಮೋಹನ್ ಎಸ್ ಮತ್ತು ಶ್ರೀಮತಿ ಪ್ರಮೀಳಾ ಎನ್.ಎಂ ದಂಪತಿಗಳ ಪುತ್ರ ಶಮಂತ್ ಡಿ.ಎಂ., ಅಜ್ಜಾವರ ಗ್ರಾಮದ ಅತ್ಯಡ್ಕ ಶರತ್ ಪಿ. ಮತ್ತು ಶ್ರೀಮತಿ ಗಾನಶ್ರೀ ದಂಪತಿಗಳ ಪುತ್ರ ನಿವೇಧ್ಯ್ ಡಿ.ಎಸ್., ಐನೆಕಿದು ಗ್ರಾಮದ ಕೊಕುಳಿ ಮಿಥುನ್ ಕೆ. ಮತ್ತು ಶ್ರೀಮತಿ ಚೈತ್ರಾ ಎಂ.ಆರ್.ದಂಪತಿಗಳ ಪುತ್ರ ಸಾಕ್ಷ್‌ಕೃಷ್ಣ ಕೆ.ಎಂ., ಆಲೆಟ್ಟಿ ಗ್ರಾಮದ ತಂದೆ ಮಹೇಶ ಸಿ.ಕೆ ಮತ್ತು ಶ್ರೀಮತಿ ವಿಶಾಲಾಕ್ಷಿ ದಂಪತಿಗಳ ಪುತ್ರ ದಿಯಾನ್ಶ್ ಸಿ.ಎಂ., ಬಳ್ಪ ಗ್ರಾಮದ ಕಟ್ಟಮನೆ ಅಭಿಲಾಶ್ ಕೆ.ಎಲ್ ಮತ್ತು ಶ್ರೀಮತಿ ಶ್ರುತಿ ಎ.ಎಸ್ ದಂಪತಿಗಳ ಪುತ್ರ ಅಯಾನ್ಶ್ ಕೆ. ಪುಟಾಣಿಗಳು ಬಹುಮಾನ ಪಡೆದುಕೊಂಡರು.