ಪೈಚಾರು ಹೊಟೇಲ್ ಕಳ್ಳತನ ದ ಆರೋಪಿಯನ್ನು ಶೀಘ್ರವಾಗಿ ಕಂಡು ಹಿಡಿದು ಕಾನೂನು ಕ್ರಮ ಕೈ ಗೊಳ್ಳುವಂತೆ ಡಿ. 1 ರಂದು ಸಂಜೆ ಪೈಚಾರ್ ಆರ್ ಬಿ ಬಶೀರ್ ನೇತೃತ್ವ ದಲ್ಲಿ ಸ್ಥಳೀಯ ಸುಮಾರು 15ಕ್ಕೂ ಹೆಚ್ಚು ಮಂದಿ ಸುಳ್ಯ ಠಾಣೆಗೆ ಬಂದು ಮನವಿ ನೀಡಿದರು.
ಸ್ಥಳೀಯರ ಮನವಿ ಹಾಗೂ ಹೊಟೇಲ್ ಮಾಲಕ ಕರೀಂ ರವರು ನೀಡಿದ ದೂರನ್ನು ಸ್ವೀಕರಿಸಿದ ಎಸ್ ಐ ಸಂತೋಷ್ ಬಿ ಪಿ ರವರು ಮಾತನಾಡಿ ಈ ಬಗ್ಗೆ ತುರ್ತು ಕಾರ್ಯಚರಣೆ ಮಾಡಲಾಗುತ್ತದೆ. ಅಲ್ಲದೆ ನಗರ ಪ್ರದೇಶದ ಸಿ ಸಿ ಟಿವಿಯ ದೃಶ್ಯ ಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಮತ್ತು ಆದಷ್ಟು ಬೇಗ ಕಳ್ಳರನ್ನು ಹುಡುಕಿ ಕ್ರಮ ಕೈ ಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಪೈಚಾರು ಭಾಗದ 15 ಕ್ಕೂ ಹೆಚ್ಚು ವ್ಯಾಪಾರಸ್ತರು ಇದ್ದರು.