ಪಂಜದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ -ಪಾನ್ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್

0

ಶಿವಾಜಿ ಯುವಕ ಮಂಡಲ (ರಿ.) ಕೂತ್ಕುಂಜ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಂಚೆ ಜನ ಸಂಪರ್ಕ ಅಭಿಯಾನ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ ಹಾಗೂ
ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸಹಯೋಗದಲ್ಲಿ
ಪಾನ್ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ ಡಿ.1 ರಂದು ಪಂಜ ಲಯನ್ಸ್ ಭವನದಲ್ಲಿ ನಡೆಯಿತು.

ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಬಳಕದಹೊಳೆ
ಉದ್ಘಾಟಿಸಿದರು.

ಕೂತ್ಕುಂಜ ಶಿವಾಜಿ ಯುವಕ ಮಂಡಲದ ಅಧ್ಯಕ್ಷ ಆದರ್ಶ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಶಶಿಧರ್ ಪಳಂಗಾಯ , ಅಂಚೆ ನಿರೀಕ್ಷಕ ವಿನೋದ್ ಕುಮಾರ್, ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕ ಪ್ರೊ.ರಾಘವ. ಎನ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಂಜ ವಲಯ ಮೇಲ್ವಿಚಾರಕಿ
ಶ್ರೀಮತಿ ಕಲಾವತಿ , ಶಿವಾಜಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗೀಶ್ ಚಿದ್ಗಲ್ಲು, ಕಾರ್ಯದರ್ಶಿ ಲಿಖಿತ್ ಅಜ್ಜಿಹಿತ್ಲು, ಕಾರ್ಯಕ್ರಮ ನಿರ್ದೇಶಕ ಜೀವನ್ ಬಿಳಿಮಲೆ ಕಾರ್ಯಕ್ರಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಂದನ್ ಕಕ್ಯಾನ ಸ್ವಾಗತಿಸಿದರು. ಷಣ್ಮುಖ ಹೊಸೋಕ್ಲು ನಿರೂಪಿಸಿದರು.ಲಿಖೀತ್ ಆಜ್ಜಿಹಿತ್ಲು ವಂದಿಸಿದರು. ಅಂಚೆ ಮೇಲ್ವಿಚಾರಕರಾದ ಜಯಪ್ರಕಾಶ್, ಬಾಬು, ಆನಂದ ಗೌಡ ಚೆನ್ನಕಜೆ, ರಮೇಶ, ಸಿಬ್ಬಂದಿಗಳಾದ ಪರಮೇಶ್ವರ ಕೆ, ದೇವಪ್ಪ ಸಿ, ನಿರೀಕ್ಷಾ ಕೆ ಪಿ, ಉಷಾ ಕೆ, ದರ್ಶನ್, ಮೋಕ್ಷಿತ್ , ಮೋಹಿತ್, ಶೃತಿ ಆಧಾರ್ ಕಾರ್ಡ್ ಮತ್ತು ಅಂಚೆ ಇಲಾಖೆಯ ವಿಮೆ ಯೋಜನೆಯ ಕರ್ತವ್ಯದ ನಿರ್ವಹಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಬಿ ಸಿ ಟ್ರಸ್ಟ್ ವತಿಯಿಂದ ನಡೆದ ಪಾನ್ ಕಾರ್ಡ್ ಮತ್ತು ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯ ಕರ್ತವ್ಯವನ್ನು ಲಿನ್ಯಶ್ರೀ ಎ, ಮಲ್ಲಿಕಾ ಎ ನಿರ್ವಹಿಸಿದರು.