ಐವರ್ನಾಡು ಗ್ರಾಮ ಪಂಚಾಯತ್ ಸಮಗ್ರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಐವರ್ನಾಡು ಇದರ ವತಿಯಿಂದ ಸಂಜೀವಿನಿ ಒಕ್ಕೂಟದ ವಾರ್ಷಿಕೋತ್ಸವದ ಪ್ರಯುಕ್ತ ಒಕ್ಕೂಟದ ಸದಸ್ಯೆಯರಿಗೆ ಹಾಗೂ ಗ್ರಾಮದ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ.01 ರಂದು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀಮತಿ ಭಾರತಿ ಗುತ್ತಿಗಾರುಮೂಲೆ ಸಮಗ್ರ ಸಂಜೀವಿನ ಒಕ್ಕೂಟ ಐವರ್ನಾಡು ಇವರು ವಹಿಸಿದ್ದರು.
ಶ್ರೀಮತಿ ಲೀಲಾವತಿ ಕುತ್ಯಾಡಿ ಅಧ್ಯಕ್ಷರು ಗ್ರಾಮ ಪಂಚಾಯತ್ ಐವರ್ನಾಡು ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ವೀರನಾಥನ್, ಶ್ರೀಮತಿ ಪ್ರಮೀಳಾ ರಾಜ್ ನಿರ್ಣಾಯಕವಾಗಿ ಆಗಮಿಸಿದ್ದರು. ಜೊತೆಗೆ ಕಾರ್ಯದರ್ಶಿ ಕೀರ್ತನಾ, ಮಾಜಿ ಅಧ್ಯಕ್ಷರಾದ ರೇವತಿ ಬೊಳುಗುಡ್ಡೆ ಜೊತೆಗಿದ್ದರು.
ನಿಶಾ ಪ್ರಾರ್ಥಿಸಿ,ರೇಖಾ ಸ್ವಾಗತಿಸಿ, ಹರ್ಷಿತಾ ವಂದಿಸಿದರು.
ಅಮಿತಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಜೊತೆಗೆ NRLM ಸಿಬ್ಬಂದಿಗಳು, ಸಂಘದ ಸದಸ್ಯರು ಗ್ರಾಮದ ಸದಸ್ಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.