ಯುವಕ ಮಂಡಲ ಕನಕಮಜಲು, ಚಾಮರಾಜೇಂದ್ರ ಸರಕಾರಿ ದೃಶ್ಯ ಕಲಾ ಕಾಲೇಜು ಮೈಸೂರು ಆಶ್ರಯದಲ್ಲಿ ಸು – ಯೋಗ ನಿಸರ್ಗ ಚಿತ್ರಕಲಾ ಶಿಬಿರ ಡಿ. 2ರಂದು ಕನಕಮಜಲಿನ ಮೂರ್ಜೆ ಶ್ರೀ ಬಾಲನಿಲಯದಲ್ಲಿ ಉದ್ಘಾಟನೆಗೊಂಡಿತು.
ಚಿತ್ರ ಕಲಾವಿದ ಮೋನಪ್ಪ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು.
ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಗಂಗಾಧರ ಕಲ್ಲಪಳ್ಳಿ, ಸುಳ್ಯ ಯುವಜನ ಸಂಯುಕ್ತ ಮಂಡಳಿಯ
ಅಧ್ಯಕ್ಷ ವಿಜಯಕುಮಾರ್ ಉಬರಡ್ಕ ಆಗಮಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಯುವಕ ಮಂಡಲ ಅಧ್ಯಕ್ಷ ಹರ್ಷಿತ್ ಉಗ್ಗಮೂಲೆ, ಕಾರ್ಯದರ್ಶಿ ಅಶ್ವತ್ ಅಡ್ಕಾರ್ ಉಪಸ್ಥಿತರಿದ್ದರು.
ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಪೂರ್ವದ್ಯಕ್ಷರುಗಳು, ಪದಾಧಿಕಾರಿಗಳು, ಚಿತ್ರಕಲಾ ಶಿಬಿರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಯಪ್ರಸಾದ್ ಕಾರಿಂಜ ಕಾರ್ಯಕ್ರಮ ನಿರೂಪಿಸಿ, ಹರ್ಷಿತ್ ಉಗ್ಗಮೂಲೆ ಸ್ವಾಗತಿಸಿ, ಅಶ್ವತ್ ಅಡ್ಕಾರ್ ವಂದಿಸಿದರು.
ಡಿ. 8ರವರೆಗೆ ಚಿತ್ರಕಲಾ ಶಿಬಿರ ನಡೆಯಲಿದೆ. ಸುಮಾರು 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.