ಬೆಳ್ಳಾರೆ : ಕೊಳಂಬಳದಲ್ಲಿ ಚರಂಡಿಗೆ ಬಿದ್ದ ಓಮ್ನಿ – ಅಪಾಯದಿಂದ ಪಾರು

0

ಬೆಳ್ಳಾರೆ ಸಮೀಪ ಕೊಳಂಬಳದಲ್ಲಿ ಓಮ್ನಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಚರಂಡಿಗೆ ಬಿದ್ದ ಘಟನೆ ಇಂದು ನಡೆದಿದೆ.
ಬೆಳ್ಳಾರೆಯಿಂದ ನೆಟ್ಟಾರು ಕಡೆ ಹೋಗುವ ಓಮ್ನಿ ರಸ್ತೆ ಬದಿ ಚರಂಡಿಗೆ ಬಿದ್ದಿದ್ದು ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಕೇಬಲ್ ವಯರ್ ಹಾಕುವವರು ರಸ್ತೆ ಬದಿ ಅಗೆದಿದ್ದು ಮಳೆ ಬಂದಿರುವುದರಿಂದ ರಸ್ತೆ ಬದಿ ಮಣ್ಣು ಕೊಚ್ಚಿ ಹೋಗಿದ್ದು ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ.
ವಾಹನ ಸವಾರರಿಗೆ ಇದರಿಂದ ತೊಂದರೆಯಾಗಿರುವುದಾಗಿ ತಿಳಿದುಬಂದಿದೆ.