ಕನಕಮಜಲು : ಗ್ರಾಮೀಣ ಕ್ರೀಡಾಕೂಟ

0

ಕನಕಮಜಲು ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ) ಕನಕಮಜಲು ಇದರ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟವು ಡಿ. 01 ರಂದು ಶ್ರೀ.ನ.ರಾ.ಗೌ. ಸ.ಮಾ. ಹಿ.ಪ್ರಾ.ಶಾಲೆ ಕನಕಮಜಲು ಇದರ ಶಾಲಾ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟದ ಸಭಾದ್ಯಾಕ್ಷತೆಯನ್ನು ಯುವಕ ಮಂಡಲ ಅಧ್ಯಕ್ಷ ಹರ್ಷಿತ್ ಉಗ್ಗಮೂಲೆ ವಹಿಸಿದರು.

ಕ್ರೀಡಾಕೂಟದ ಉದ್ಘಾಟನೆಯನ್ನು ಕನಕಮಜಲು ಗ್ರಾ. ಪಂ. ಸದಸ್ಯೆ ದೇವಕಿ ಕುದ್ಕುಳಿ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು. ಅಥಿತಿಗಳಾಗಿ ನಮ್ಮೊಂದಿಗೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ಹಮೀದ್ ಕೆ.ಎಂ, ಹಾಗೆಯೇ ಕಾರ್ಯದರ್ಶಿ ಅಶ್ವಥ್ ಅಡ್ಕಾರ್, ಕ್ರೀಡಾ ಕಾರ್ಯದರ್ಶಿ ಚೇತನ್ ನೆಡಿಲು, ಕಾರ್ಯಕ್ರಮ ಸಂಯೋಜಕರಾದ ಸಂತೋಷ್ ಕುಮಾರ್ ನೆಡಿಲು, ರತನ್ ಕೊಲ್ಲಂತ್ತಡ್ಕ ಉಪಸ್ಥಿತರಿದ್ದರು. ರತನ್ ಕೊಲ್ಲಂತ್ತಡ್ಕ ಸ್ವಾಗತಿಸಿ, ಕ್ಷಿತಿಜ್ ಕಾರಿಂಜ ವಂದಿಸಿದರು. ಚಂದ್ರಶೇಖರ್ ನೆಡಿಲು ಕಾರ್ಯಕ್ರಮ ನಿರೂಪಿಸಿದರು.
ನಂತರ ಸುಮಾರು 25ಕ್ಕೂ ಮೇಲ್ಪಟ್ಟು ಕ್ರೀಡೆಗಳು ಮೈದಾನದಲ್ಲಿ ಮೂಡಿಬಂತು.

ಸಮಾರೋಪ ಸಮಾರಂಭ :
ಕ್ರೀಡಾಕೂಟದ ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಹರ್ಷಿತ್ ಉಗ್ಗಮೂಲೆ ವಹಿಸಿದರು. ಬಹುಮಾನ ವಿತರಕರಾಗಿ ನಮ್ಮೊಂದಿಗೆ ಮಾಜಿ ಗ್ರಾ. ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ, ಅಥಿತಿಗಳಾಗಿ ಗ್ರಾ. ಪಂ. ಸದಸ್ಯೆ ಸುಮಿತ್ರಾ ಕುತ್ಯಾಳ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಪ್ರಸಾದ್ ಕಾಟೂರು, ಕಾರ್ಯದರ್ಶಿ ಅಶ್ವಥ್ ಅಡ್ಕಾರ್, ಕ್ರೀಡಾಕಾರ್ಯದರ್ಶಿ ಚೇತನ್ ನೆಡಿಲು, ಕಾರ್ಯಕ್ರಮ ಸಂಯೋಜಕರಾದ ಸಂತೋಷ್ ಕುಮಾರ್ ನೆಡಿಲು, ರತನ್ ಕೊಲ್ಲಂತ್ತಡ್ಕ ಉಪಸ್ಥಿತರಿದ್ದರು. ಬಹುಮಾನ ವಿಜೇತರಿಗೆ ಶ್ರೀಧರ ಕುತ್ಯಾಳ ಬಹುಮಾನ ವಿತರಿಸಿದರು. ಕ್ರೀಡಾಕೂಟದಲ್ಲಿ ಯುವಕ ಮಂಡಲದ ಎಲ್ಲಾ ಪೂರ್ವಾಧ್ಯಕ್ಷರುಗಳೂ, ಪದಾಧಿಕಾರಿಗಳು, ಸದಸ್ಯರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದ್ರಶೇಖರ್ ನೆಡಿಲು ನಿರೂಪಿಸಿದರು. ಸ್ವಸ್ತಿಕ್ ಕುತ್ಯಾಳ ಸ್ವಾಗತಿಸಿ ಅಶ್ವಥ್ ಅಡ್ಕಾರ್ ವಂದಿಸಿದರು.