ಇಲಾಖಾಧಿಕಾರಿಗಳು,ಹಾಗೂ ನಾಯಕರ ಕಾರ್ಯವೈಖರಿ ಬಗ್ಗೆ ಎಂಎಲ್ಸಿಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು
ಪಕ್ಷದ ಗೆಲುವಿಗೆ ಕಾರ್ಯಕರ್ತರೇ ರೂವಾರಿ ಅವರನ್ನು ಗುರುತಿಸಿ ಒಂದು ಮಾಡಿ: ಮಂಜುನಾಥ ಭಂಡಾರಿ
ಕೇವಲ ನಾಯಕರುಗಳು ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಾತ್ರ ಪಕ್ಷ ಗೆಲ್ಲಲು ಸಾಧ್ಯವಿಲ್ಲ. ಪ್ರತೀ ಬೂತ್ ಮಟ್ಟದ ಪಕ್ಷದ ಕಾರ್ಯaಕರ್ತರುಗಳ ಪರಿಶ್ರಮ ಮತ್ತು ಅವರೊಂದಿಗೆ ನಾಯಕರುಗಳಿಗೆ ಇರುವ ಹೊಂದಾಣಿಕೆ ಮತ್ತು ಪಕ್ಷದ ಎಲ್ಲಾ ಘಟಕಗಳ ಪದಾಧಿಕಾರಿಗಳು, ಸದಸ್ಯರುಗಳ ಒಂದುಗೂಡುವಿಕೆ ಪಕ್ಷವನ್ನು ಗೆಲ್ಲಿಸುತ್ತದೆ.
ಆದ್ದರಿಂದ ಪ್ರತಿಯೋರ್ವ ನಾಯಕರೂ ಕೂಡ ಇದನ್ನು ಅರಿತು ಪ್ರತೀ ಬೂತ್ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿಬೇಕು ಎಂದು ಎಂ ಎಲ್ಸಿ ಮಂಜುನಾಥ್ ಭಂಡಾರಿಯವರು ಹೇಳಿದರು.
ಅವರು ಡಿ 4 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಭೆಯ ಆರಂಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ಮಾತನಾಡಿ, ಸುಳ್ಯಕ್ಕೆ ಬೇಕಾಗಿರುವ ಯೋಜನೆಗಳ ಪಟ್ಟಿಯನ್ನು ನೀಡಿ ಸುಳ್ಯದ ಟೌನ್ ಹಾಲ್ ದುರಸ್ಥಿ ಬಗ್ಗೆ ಮತ್ತು ಸರಕಾರದಿಂದ ಸುಳ್ಯಕ್ಕೆ ವಿಶೇಷ ಅನುದಾನ ಕೊಡಿಸುವ ಬಗ್ಗೆ,ಕೃಷಿಕರರಿಗೆ ವಿವಿಧ ಯೋಜನೆಗಳನ್ನು ನೀಡುವ ಬಗ್ಗೆ ಪ್ರಸ್ತಾಪ ಮಾಡಿದರು.
ಬಳಿಕ ಇದಕ್ಕೆ ಉತ್ತರ ನೀಡಿ ಮಾತನಾಡಿದ ಎಂ ಎಲ್ಸಿ ರವರು ನನಗೆ ಸರಕಾರದಿಂದ ಒಟ್ಟು 6 ವರ್ಷಕ್ಕೆ 12 ಕೋಟಿ ರೂ ಅನುದಾನ ಕೊಡುತ್ತಾರೆ.ಸಂಪಾಜೆ ಯಿಂದ ಶಿರೂರು ವರೆಗೆ ಸುಮಾರು 26 ಬ್ಲಾಕ್ ಗಳು, 385 ಗ್ರಾಮಗಳು, 10 ರಿಂದ 15 ಸ್ಥಳೀಯ ಆಡಳಿತಗಳು ನನ್ನ ವ್ಯಾಪ್ತಿಗೆ ಇದ್ದು ಇದನ್ನು ಸಮಾನವಾಗಿ ಹಂಚಿದರೆ ಒಂದೊಂದು ಗ್ರಾಮಕ್ಕೆ 3 ಲಕ್ಷ ರೂ ವಷ್ಟೇ ಕೊಡಲು ಸಾಧ್ಯ. ಈಗಾಗಲೇ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ 45.50 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿದ್ದೇನೆ.
ಆದ್ದರಿಂದ ಮೊದಲು ನೀವು ಇಲ್ಲಿಗೆ ಬೇಕಾದ ಕೆಲಸ ಕಾರ್ಯಗಳನ್ನು ಗುರುತಿಸಿ ಅದರ ಪಕ್ಕ ಪಟ್ಟಿಯನ್ನು ನೀಡಿ. ಹಾಗಿದ್ದರೆ ನನಗೆ ಸಂಭಂದ ಪಟ್ಟ ಸಚಿವರುಗಳ ಗಮನಕ್ಕೆ ನೀಡಿ ನಿಮ್ಮ ಕೋರಿಕೆಯನ್ನು ನೀಡಬಹುದು. ಅದಲ್ಲದೆ ವಿಶೇಷ ಅನುದಾನ ತರಿಸಿ ಎಂದರೆ ಯಾವುದನ್ನು ತರಿಸುವುದು ಎಂದಾಗುತ್ತದೆ. ಸುಳ್ಯ ಟೌನ್ ಹಾಲ್ ಕುರಿತು ದುರಸ್ಥಿಕರಣದ ಪ್ಲಾನಿಂಗ್ ಪಟ್ಟಿ ಇದ್ದಲ್ಲಿ ಕೊಡಿ ಅದನ್ನು ಸಂಭಂದಪಟ್ಟ ಸಚಿವರ ಗಮನಕ್ಕೆ ನೀಡಿ ವ್ಯವಸ್ಥೆ ಮಾಡುವ ಎಂದರು.
ಮುಂದಿನ ದಿನಗಳಲ್ಲಿ ಬರುವ ಸಹಕಾರಿ ಸಂಘದ ಚುನಾವಣೆ ಗ್ರಾಮ ಮಟ್ಟದಲ್ಲಿ ಬಹಳ ಮುಖ್ಯವಾದದ್ದು. ಒಂದು ಗ್ರಾಮದ ಅಭಿವೃದ್ಧಿಗೆ ಆ ಭಾಗದ ಸಹಕಾರಿ ಸಂಘಗಳು ಬಹು ಮುಖ್ಯ ಪಾತ್ರವಾಗಿರುತ್ತದೆ. ಆ ಮೂಲಕ ಗ್ರಾಮದ ಮತ್ತು ಅಲ್ಲಿಯ ನಿವಾಸಿಗಳ ಅಭಿವೃದ್ಧಿಗಾಗಿ ನಮ್ಮ ಪಕ್ಷದ ಸದಸ್ಯರುಗಳು ಚುನಾವಣೆಗೆ ಭಾಗವಹಿಸಬೇಕು.ಯಾವುದೇ ಕಾರಣಕ್ಕೂ ಅದರಿಂದ ದೂರ ಸರಿಯುವ ಕೆಲಸ ನಮ್ಮಿಂದ ಹಾಗಬಾರದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಚರ್ಚೆ ವೇಳೆ ಎಂ ಎಲ್ಸಿ ರವರೊಂದಿಗೆ ಕೆಲವು ಇಲಾಖಾ ಅಧಿಕಾರಿಗಳ ಮತ್ತು ನಾಯಕರುಗಳ ಬಗ್ಗೆ ಕಾರ್ಯಕರರ್ತರುಗಳು ಅಸಮಾಧಾನ ವ್ಯಕ್ತ ಪಡಿಸಿದ ಘಟನೆಯೂ ನಡೆಯಿತು.
ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ಅಲ್ಲಿಯ ಪಂಚಾಯತ್ ಸದಸ್ಯರುಗಳು ಇಬ್ಬರು ಪಕ್ಷೇತರ ವಾಗಿ ಸ್ಪರ್ದಿಸುವ ಮತ್ತು ಇದರಿಂದ ಏನಾದರೂ ಸಮಸ್ಯೆ ಉಂಟಾದರೆ ನಾನು ಜವಾಬ್ದಾರನಲ್ಲ ಎಂಬ ವಿಷಯವನ್ನು ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆಯವರು ಪ್ರಸ್ತಾಪಿಸಿದಾಗ ಈ ವಿಷಯವನ್ನು ಕೂಡಲೇ ಬ್ಲಾಕ್ ಮಟ್ಟದ ಮುಖಂಡರು ಸರಿ ಪಡಿಸಲು ಪ್ರಯತ್ನಿಸಿ ಅದು ಆಗದಿದ್ದಲ್ಲಿ ಜಿಲ್ಲಾ ಮಟ್ಟದ ನಾಯಕರುಗಳ ಮೂಲಕ ಬಗೆಹರಿಸುವ ಕೆಲಸ ಮಾಡುವ ಎಂದು ಸಲಹೆ ನೀಡಿದರು.
ಇದೇ ವೇಳೆ ನ ಪಂ ಸದಸ್ಯ ಶರೀಫ್ ಕಂಠಿ ನಮ್ಮ ಕೆಲವು ನಾಯಕರುಗಳೇ ಇಲ್ಲಿ ಗೊಂದಲ ಮಾಡುವವರು. ವಿನಾ ಕಾರಣ ಸುಳ್ಯದ ಠಾಣಾ ಪೊಲೀಸ್ ಅಧಿಕಾರಿಯನ್ನು ಬದಲಾವಣೆ ಮಾಡುವ ಕೆಲಸ ಮಾಡಿದ್ದಾರೆ. ಈ ಮೊದಲು ಬಂದ ಎಸ್ ಐ ಉತ್ತಮ ಅಧಿಕಾರಿಯಾಗಿದ್ದರು. ಆದರೆ ನಮ್ಮ ಕೆಲವು ನಾಯಕರು ಯಾರದೋ ಮಾತು ಕೇಳಿ ಅವರನ್ನು ಬದಲಾವಣೆ ಮಾಡುವ ಕೆಲಸ ಮಾಡಿದರು.ಹೊಸ ಹೊಸ ಅಧಿಕಾರಿಗಳು ಆಗಿಂದ ಆಗ ಬದಲಾವಣೆ ಆಗುವಾಗ ಸಮಾಜದಲ್ಲಿ ಶಾಂತಿ ಶುವ್ಯವಸ್ಥೆ ಗೆ ತೊಂದರೆ ಉಂಟಾಗುತ್ತದೆ.ಇದನ್ನು ನಾವು ಅರ್ಥ ಮಾಡಿಕೊಳ್ಳ ಬೇಕು ಎಂದರು. ಇದಕ್ಕೆ ಸತ್ಯಕುಮಾರ್ ಆಡಿಂಜರವರು ದ್ವನಿ ಗೂಡಿಸಿದರು.
ಅಲ್ಲದೆ ತಾಲೂಕು ಕಚೇರಿಯಲ್ಲೂ ಕೆಲವು ವಿಭಾಗದಲ್ಲಿ ಅಧಿಕಾರಿಗಳು ತಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತದೆ. ಇದನ್ನು ಕೇಳಿದರೆ ನಮ್ಮ ಮಾತಿಗೆ ಬೆಲೆಯೇ ಕೊಡುವುದಿಲ್ಲ. ಇದರಿಂದಾಗಿ ನಾವು ಮುಖಂಡರುಗಳು ಸಾರ್ವಜನಿಕರ ಮುಂದೆ ಮುಜುಗರ ಪಡುವಂತೆ ಆಗುತ್ತೆ ಎಂದು ಅಡ್ವಕೇಟ್ ಪವಾಜ್ ಕನಕಮಜಲು ಹಾಗೂ ಸತ್ಯ ಕುಮಾರ್ ಆಡಿಂಜ ಹೇಳಿದರು.
ಇದೇ ವೇಳೆ ಕೆ ಡಿ ಪಿ ಸದಸ್ಯೆ ಸುಜಯಕೃಷ್ಣ ಮಾತನಾಡಿ ಸುಭ್ರಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಅಯ್ಯಪ್ಪ ಸುತ ಗುಂಡಿ ಯವರು ಬಿ ಜೆ ಪಿ ಪಕ್ಷದ ಪರವಾಗಿ ಕೆಲಸ ಮಾಡುವ ರೀತಿ ವರ್ತನೆ ಮಾಡುತ್ತಾರೆ. ಇದರಿಂದ ನಮ್ಮವರಿಗೆ ಬೆಲೆನೇ ಇಲ್ಲದಂತೆ ಆಗಿದೆ ಎಂದರು.
ಇದೇ ವೇಳೆ ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ ರವರು ವೇದಿಕೆಗೆ ತೆರಳಿ ಅಸಮಾಧಾನವನ್ನು ವ್ಯಕ್ತ ಪಡಿಸಿ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಅಧಿಕಾರವನ್ನು ನೀಡುತ್ತಿಲ್ಲ ನಮ್ಮ ಮುಖಂಡರು. ಸ್ಥಳೀಯ ಆಡಳಿತ ಆಗಿರಬಹುದು, ದೇವಸ್ಥಾನ ಆಡಳಿತ ಸಮಿತಿಯಾಗಿರ ಬಹುದು, ಅಲ್ಲದೆ ಬೇರೆ ಬೇರೆ ಸಂಸ್ಥೆಗಳಿಗೆ ನಾಮ ನಿರ್ದೇಶಕ ಸದಸ್ಯರಾಗುವ ಅವಕಾಶವನ್ನು ಕೊಡುತ್ತಿಲ್ಲ. ಸರಕಾರ ನಮ್ಮದಿದ್ದರೂ ಬೇರೆ ಬೇರೆ ಕಡೆಗಳಲ್ಲಿ ಬಿ ಜೆ ಪಿ ಕಾರ್ಯಕರ್ತರುಗಳೇ ಸದಸ್ಯರಾಗಿ ಉಳಿದಿದ್ದಾರೆ. ಇದೆಲ್ಲಾ ಸರಿ ಪಡಿಸದಿದ್ದರೆ ನಮ್ಮ ಕಾರ್ಯಕರ್ತರು ದುಡಿ ಬೇಕು., ಒಂದಾಗಬೇಕು ಎಂದರೆ ಹೇಗೆ ಸಾಧ್ಯ ಎಂದು ಕೇಳಿದರು.
ಕೊನೆಯಲ್ಲಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರನ್ನು ಒಮ್ಮೆ ಕರೆಸಿ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅವರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಮತ್ತು ಪರಿಹಾರ ಕಂಡುಕೊಳ್ಳಲು ವ್ಯವಸ್ಥೆ ಕಲ್ಪಿಸಿಕೊಡಿ ಎಂದು ವೆಂಕಪ್ಪ ಗೌಡರು ಎಂ ಎಲ್ಸಿ ರವರಲ್ಲಿ ಕೇಳಿಕ್ಕೊಂಡಾಗ ಎಂ ಎಲ್ಸಿ ರವರು ಮಾಡಿಕೊಡುವ ಭರವಸೆ ನೀಡಿ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಸಂಚಾಲಕ ಸುಭಾಷ್ ಚಂದ್ರ ಕೋಲ್ನಾಡು, ಕೆ ಪಿ ಸಿ ಸಿ ಕಾರ್ಯದರ್ಶಿ ದನಂಜಯ ಅಡ್ಡಪಂಗಾಯ,ಮಾಜಿ ಸದಸ್ಯ ಡಾ. ರಘು,ಕೆ ಪಿ ಸಿ ಸಿ ಸದಸ್ಯೆ ಶ್ರೀಮತಿ ಸರಸ್ವತಿ ಕಾಮತ್,ಕಾರ್ಮಿಕ ಮುಖಂಡ ಕೆ ಪಿ ಜಾನಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ರಾಜ್ಯ ಅಲ್ಪಸಂಖ್ಯಾತ ಘಟಕ ಪ್ರ. ಕಾರ್ಯದರ್ಶಿ ಕೆ ಎಂ ಮುಸ್ತಫಾ, ಮುಖಂಡರು ಗಳಾದ ವಿಠ್ಠಲ್ ದಾಸ್,ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ,ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಪಿ ಎಸ್ ಗಂಗಾಧರ್,ಜಯ ಪ್ರಕಾಶ್ ನೆಕ್ರಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಪಿ ಸಿ ಜಯರಾಮ್ ಸ್ವಾಗತಿಸಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿ ಶಂಕರ್ ಕಲ್ಮಡ್ಕ ವಂದಿಸಿದರು.
ಸಭೆಯಲ್ಲಿ ಕೆಪೆಕ್ ಮಾಜಿ ನಿರ್ದೇಶಕ ಹಾಜಿ ಪಿ ಎ ಮಹಮ್ಮದ್,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಮುಖಂಡರುಗಳಾದ ಮಹಮ್ಮದ್ ಕುಂಞಿ ಗೂನಡ್ಕ,ಸಚಿನ್ ರಾಜ್ ಶೆಟ್ಟಿ ಸೇರಿದಂತೆ ವಿವಿಧ ಮುಖಂಡರು ಗಳು ಕಾರ್ಯಕರ್ತರುಗಳು ಸಭೆಯಲ್ಲಿ ಭಾಗವಹಿಸಿದ್ದರು.