ಮಿಥುನ ಅಶ್ವಥ್ ಜಬಳೆಯವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

0

ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಮಿಥುನ ಅಶ್ವಥ್ ಜಬಳೆಯವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನವಂಬರ್ ೨೯ರಂದು ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕಲಾಭೂಮಿ ಪ್ರತಿಷ್ಠಾನ ಸಂಸ್ಥೆಯು ೬೯ ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಬೆಂಗಳೂರಿನ ಕಲಾ ಗ್ರಾಮದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಈ ವರ್ಷದ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.


ಮಿಥುನ ಅಶ್ವಥ್‌ರವರು ಐವರ್ನಾಡು ಗ್ರಾಮದ ಜಬಳೆ ಅಶ್ವಥ್ ರವರ ಪತ್ನಿ. ಪಂಬೆತ್ತಾಡಿ ಗ್ರಾಮದ ಬಾಬ್ಲುಬೆಟ್ಟು ಬಾಬು ಗೌಡ ಹಾಗೂ ಚಂದ್ರಾವತಿ ದಂಪತಿಗಳ ಪುತ್ರಿ.