ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆ

0

ತಾಲೂಕು ಆಸ್ಪತ್ರೆ ಮುಂಭಾಗ ತುರ್ತುಚಿಕಿತ್ಸಾ ವಾಹನ ಮಾತ್ರ ನಿಲ್ಲಿಸಲು ನಿರ್ಧಾರ : ಟೋಕನ್ ವ್ಯವಸ್ಥೆಗೂ ಸಭೆಯಲ್ಲಿ ನಿರ್ಣಯ

ಸುಳ್ಯ ತಾಲೂಕು ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆಯು ಶಾಸಕಿ ಭಾಗೀರಥಿ ಮುರುಳ್ಯ ರವರ ಅಧ್ಯಕ್ಷತೆಯಲ್ಲಿ ಡಿ.6ರಂದು‌ ನಡೆಯಿತು.

ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ‌ ಹಾಗೂ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ಕರುಣಾಕರ ಕೆ.ವಿ. ಯವರು ಆಸ್ಪತ್ರೆ ರಕ್ಷಾ ಸಮಿತಿಯ ಅನುದಾನದ ಬಗ್ಗೆ ವಿವರ ನೀಡಿ, ಹೊರರೋಗಿಗಳು ಹಾಗೂ ಎ ಪಿ ಎಲ್ ಒಳರೋಗಿಗಳಿಂದ ಹಾಗೂ ತರಬೇತಿಗೆ ಬರುವ ಮೆಡಿಕಲ್ ವಿದ್ಯಾರ್ಥಿಗಳಿಂದ ರಕ್ಷಾಸಮಿತಿಗೆ ಅನುದಾನ ಲಭ್ಯವಾಗುವ ವಿವರ ನೀಡಿದರು.
ಬಳಿಕ ವಿವಿಧ ವಿಚಾರಗಳು ಪ್ರಸ್ತಾಪ ವಾಗಿ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಯಿತು.

ಆಸ್ಪತ್ರೆಯ ಕ್ಯಾಂಟೀನ್ ಸ್ಥಳಾಂತರದ ಬಗ್ಗೆ ಮತ್ತು ಟೆಂಡರ್ ಕರೆಯುವ ಬಗ್ಗೆ ವೈದ್ಯಾಧಿಕಾರಿಗಳು ಪ್ರಸ್ತಾಪಿಸಿದರು. ಶಾಸಕರು ಪರೀಶೀಲಿಸುದಾಗಿ ಸಭೆಯಲ್ಲಿ ತಿಳಿಸಿದರು .

ಹಿಂದಿನ ಸಭೆಯ ನಿರ್ಣಯದಂತೆ ಅಪಘಾತವಾದ ಅಂಬುಲೆನ್ಸ್‌ ವಾಹನದ ದುರಸ್ತಿ ಬಾಕಿ ಮೊತ್ತ ರಕ್ಷಾ ಸಮಿತಿ ಯಿಂದ ಪಾವತಿಸಿದ ಬಗ್ಗೆ ತಿಳಿಸಲಾಯಿತು ವೈದ್ಯಾಧಿಕಾರಿಗಳು ತಿಳಿಸಿದರು.

ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ನ್ನು ಹಳೆಯ ವಸತಿಗೃಹಗಳ ತೆರವುಗೊಳಿಸಿ ಸ್ಥಾಪಿಸಲಾಗಿದೆ ಹಾಗೂ ಹೆರಿಗೆ ತಜ್ಞರು ಮತ್ತು ಶಸ್ತ್ರಚಿಕಿತ್ಸಾ ತಜ್ಞರು ತೆರವು ಬಗ್ಗೆ ಸಭೆಯ ಗಮನಕ್ಕೆ ತರಲಾಗಿ ಶಾಸಕರು ಆದಷ್ಟು ಪ್ರಯತ್ನ ಪಡುವುದಾಗಿ ತಿಳಿಸಿ ಹಾಗೂ ಈಗಿನ ಕರೆಯಾಧಾರಿತ ಹೆರಿಗೆ ತಜ್ಞರೊಂದಿಗೆ ಆಸ್ಪತ್ರೆಯ ಸಿಬ್ಬಂದಿಗಳು ಜನ ಸಾಮಾನ್ಯರ ಹಿತಾದೃಷ್ಟಿಯಿಂದ ಕರ್ತವ್ಯ ನಿರ್ವಹಿಸಲಿ ಎಂಬುದಾಗಿ ಹಾಗೂ ಹೆರಿಗೆ ತಜ್ಞರ ನೇಮಕಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಬರೆಯುವುದು ಎಂದು ತೀರ್ಮಾನಿಸಲಾಯಿತು.

ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿಗೆ ಅತಿ ಅವಶ್ಯವಿರುವ ಅನುಭವಿ ಎಕ್ಸ್‌ ರೇ ತಂತ್ರಜ್ಞರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕಣ್ಣಿನ ಪರೀಕ್ಷಾ ತಂತ್ರಜ್ಞರನ್ನು ನೇಮಕ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿಗೆ ಬರೆಯುವುದು ಎಂದು ತೀರ್ಮಾನಿಸಲಾಯಿತು.

ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತ ಪರೀಕ್ಷೆ ಮಾಡುವ ಯಂತ್ರ ಖರೀದಿಯ ಆವಶ್ಯಕತೆ ಬಗ್ಗೆ ಸಭೆಯ ಗಮನ ಸೆಳೆಯಲಾಗಿ ಖರೀದಿಸಲು ನಿರ್ಣಯಿಸಲಾಯಿತು.

ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಬೇಕಾದ PHACO EMULSIFICATION ಯಂತ್ರ ಖರೀದಿಗೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಆರೋಗ್ಯ ರಕ್ಷಾ ಸಮಿತಿಯ 2024-25ನೇ ಸಾಲಿನ ಕ್ರಿಯಾಯೋಜನೆಯನ್ನು ಮಂಡಿಸಿ ಸಮಿತಿಯ ಅನುಮೋದನೆಯನ್ನು ಪಡೆಯಲಾಯಿತು.

ಆಸ್ಪತ್ರೆಯ ಮುಂಭಾಗದಲ್ಲಿ ತುರ್ತುಚಿಕಿತ್ಸಾ ವಾಹನ ಮಾತ್ರ ನಿಲ್ಲಿಸುವ ಬಗ್ಗೆ ತೀರ್ಮಾನಿಸಲಾಯಿತು.

ಈಗಿನ ಪಥ್ಯಾಹಾರದ ಟೆಂಡರ್ ಮಾರ್ಚಿ ಮುಗಿಯುವ ತನಕ ಈಗಿನ ಟೆಂಡರ್ ಮಾಡಿರುವುವವರೇ ಮುಂದುವರಿಯಲಿ ಸರಬರಾಜು ಮಾಡಿದ ದಿನಸಿ ಮತ್ತು ತರಕಾರಿಯ ಗುಣಮಟ್ಟ ಮತ್ತು ತೂಕವನ್ನು ಪರಿಶೀಲಿಸಲು ತಿಳಿಸಿ ರೋಗಿಗಳ ಪಥ್ಯಾಹಾರದ ಬಗ್ಗೆ ಗಮನ ನೀಡಲು ಸೂಚಿಸಲಾಯಿತು.

ಕರ್ತವ್ಯದಲ್ಲಿರುವ ವೈದ್ಯರು ತುರ್ತುಚಿಕಿತ್ಸಾಗೆ ಆಸ್ಪತ್ರೆಯಲ್ಲಿಯೇ ಇದ್ದು ಲಭ್ಯವಿರಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಗಂಡಸರ ವಾರ್ಡನಲ್ಲಿ ಒಂದು ಶೌಚಾಲಯವನ್ನು ರೋಗಿಗಳ ಪರೀಚಾರಕ ಮಹಿಳೆಗೆ ಮೀಸಲಿಡಲು ನಿರ್ಣಯಿಸಲಾಯಿತು.

ಫಾರ್ಮಸಿ ಹಾಗೂ ರಕ್ತ ಪರೀಕ್ಷಾ ಕೇಂದ್ರದಲ್ಲಿ ಟೋಕನ್ ವ್ಯವಸ್ಥೆ ಜಾರಿಗೆ ತರಲು ನಿರ್ಣಯಿಸಲಾಯಿತು.

ಡಯಾಲಿಸಿಸ್ ವಿಭಾಗ ದಲ್ಲಿ ನೂತನ ಯು ಪಿ ಎಸ್ ಅಳವಡಿಸಲು ನಿರ್ಣಯಿಸಲಾಯಿತು.

ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಗಳಾದ ಶಹೀದ್ ಪಾರೆ, ರಾಧಾಕೃಷ್ಣ ಪರಿವಾರಕಾನ, ಚಂದ್ರನ್ ಕೂಟೇಲ್, ವಿಜಯ ಜಯರಾಮ, ಗಿರೀಶ್
ಪಡ್ಡಂಬೈಲ್, ಸಂಜೀವ ಬಡ್ಡೇಕಲ್ಲು ಉಪಸ್ಥಿತರಿದ್ದರು.