ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆಯು ಡಿ.22 ರಂದು ಸಂಘದ ಆವರಣದಲ್ಲಿ ನಡೆಯಲಿದೆ.
ಆಡಳಿತ ಮಂಡಳಿಗೆ ಒಟ್ಟು 12 ಸ್ಥಾನಗಳಿದ್ದು ಸಾಮಾನ್ಯ ಸ್ಥಾನಗಳು 6,ಪರಿಶಿಷ್ಟ ಜಾತಿ ಮೀಸಲು ಸ್ಥಾನ 01, ಪರಿಶಿಷ್ಟ ಪಂಗಡ ಮೀಸಲು ಸ್ಥಾನ 01, ಹಿಂದುಳಿದ ವರ್ಗ ಪ್ರವರ್ಗ ,”ಎ ” ಮೀಸಲು ಸ್ಥಾನ 01, ಹಿಂದುಳಿದ ವರ್ಗ ಪ್ರವರ್ಗ ” ಬಿ”ಮೀಸಲು ಸ್ಥಾನ 01, ಮಹಿಳಾ ಮೀಸಲು ಸ್ಥಾನ 02, ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಡಿ.10 ರಂದು ಪ್ರಾರಂಭ ದಿನಾಂಕವಾಗಿದ್ದು ಡಿ.14 ಕೊನೆಯ ದಿನಾಂಕವಾಗಿರುತ್ತದೆ.ಡಿ.15 ರಂದು ನಾಮಪತ್ರ ಪರಿಶೀಲನೆ ನಡೆಯುತ್ತದೆ.
ಡಿ.16 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿರುತ್ತದೆ.
ಅಂದೇ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆಯಾದ ನಡೆಯಲಿದೆ.
ಡಿ.18 ರಂದು ಸಿಂಧುತ್ವ ಹೊಂದಿರುವ ಅಭ್ಯರ್ಥಿಗಳ ಪಟ್ಟಿ ಚಿಹ್ನೆಯೊಂದಿಗೆ ಪ್ರಕಟಗೊಳ್ಳಲಿದೆ.
ಡಿ.22 ರಂದು ಬೆಳಿಗ್ಗೆ ಗಂಟೆ 9.00 ರಿಂದ ಸಂಜೆ 4.00 ಗಂಟೆಯ ತನಕ ಸಹಕಾರಿ ಸಂಘದ ಆವರಣದಲ್ಲಿ ಚುನಾವಣೆ ನಡೆಯಲಿದೆ.
ಬಳಿಕ ಮತ ಎಣಿಕೆ ನಡೆಯಲಿದೆ.
ನಂತರ ಫಲಿತಾಂಶ ಘೋಚಣೆ ನಡೆಯಲಿದೆ.
ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರ ಕಚೇರಿ ಪುತ್ತೂರು ಉಪವಿಭಾಗದ ಮಾರಾಟಾಧಿಕಾರಿ ಶೋಭಾ ಎನ್.ಎಸ್.ಚುನಾವಣಾಧಿಕಾರಿಯಾಗಿದ್ದು ಚುನಾವಣೆ ನಡೆಸಿಕೊಡಲಿರುವರು.