ಸುಳ್ಯ ಹೊಸಗದ್ದೆ ನಿವಾಸಿ ಶಿವಕುಮಾರ್ ಎಂಬವರು ಅಸೌಖ್ಯದಿಂದ ಡಿ.6ರಂದು ರಾತ್ರಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 37 ವರ್ಷ ವಯಸ್ಸಾಗಿತ್ತು.
ವಾರದಿಂದ ವಾಂತಿ ಹಾಗೂ ಹೊಟ್ಟೆನೋವು ಸಮಸ್ಯೆಯಿಂದ ಬಳಲುತಿದ್ದ ಶಿವಕುಮಾರ್ ರವರು ವೈದ್ಯರ ಬಳಿಗೆ ಹೋಗಿದ್ದರು. ವಾಂತಿ ಕಡಿಮೆಯಾದರೂ ಹೊಟ್ಟೆನೋವು ಕಡಿಮೆಯಾಗಿರಲಿಲ್ಲವೆನ್ನಲಾಗಿದೆ. ಡಿ.6ರಂದು ಸಂಜೆ ಅವರನ್ನು ಮನೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರ ಸಲಹೆ ಮೇರೆ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಡ ರಾತ್ರಿ ಅವರು ತೀವ್ರ ಅಸ್ವಸ್ಥಗೊಂಡ ಅವರು ಮೃತಪಟ್ಟರೆಂದು ತಿಳಿದುಬಂದಿದೆ.
ಇವರು ಕೊರಂಬಡ್ಕ ಶ್ರೀ ನಾಗ ಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತಿದ್ದರು.
ಮೃತರು ತಾಯಿ ಚಂದ್ರಾವತಿ, ಪತ್ನಿ ರಮ್ಯಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.