ನೂತನ ಜೀರ್ಣೋದ್ಧಾರ ಸಮಿತಿ ರಚನೆ
ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಶ್ರೀ ರಾಮಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಸಭೆಯು ಸಮಿತಿಯ ಗೌರವಾಧ್ಯಕ್ಷ ಕುಂದಲಕಾಡು ನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ಡಿ.1ರಂದು ನಡೆಯಿತು.
ಭಜನಾ ಮಂದಿರದ ಕಾರ್ಯದರ್ಶಿ ಸತೀಶ್ ಅಂಬೆಕಲ್ಲು ಹಾಗೂ ಸಂಪಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ದಾಮೋದರ ಮಾಸ್ತರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನೂತನ ಜೀರ್ಣೋದ್ಧಾರ ಸಮಿತಿ ರಚನೆ ಮಾಡುವ ಕುರಿತು ಚರ್ಚಿಸಲಾಯಿತು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಕೆ.ಜಿ. ರಾಜಾರಾಮ ಕೀಲಾರು, ಗೌರವ ಸಲಹೆಗಾರರಾಗಿ ಮುರಳೀಧರ ಕೀಲಾರು, ಯು.ಬಿ. ಚಕ್ರಪಾಣಿ, ಪ್ರಭಾಕರ ಭಟ್, ಮಾದವ ಪೇರಾಲು, ರಾಮಚಂದ್ರ ಕಲ್ಲಗದ್ದೆ, ಆನಂದ ಗೌಡ ಪೇರಾಲು, ವಿಠಲ ರೈ ಕೈಪಡ್ಕ, ಸಿ.ವಿ. ಮನೋಹರ, ಯಮುನ ಬಿ.ಎಸ್., ಜಯಾನಂದ ಸಂಪಾಜೆ, ಉದಯಶಂಕರ ಕುಕ್ಕೇಟಿ, ಬಿ.ಆರ್. ಪದ್ಮಯ್ಯ, ಕೆ.ಪಿ. ಜಗದೀಶ್, ಸುಬ್ರಹ್ಮಣ್ಯ ಕದಿಕಡ್ಕ, ರುಕ್ಮಯ್ಯ ದಾಸ್ ಗೂನಡ್ಕ, ಗಣಪತಿ ಭಟ್ ಗೂನಡ್ಕ, ರವಿಶಂಕರ್ ಭಟ್ ಕಿಲಿಂಗಾರು ಆಯ್ಕೆಯಾದರು.
ನೂತನ ಅಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಸಂಪಾಜೆ ಜೂನಿಯರ್ ಕಾಲೇಜು ಪ್ರಾಂಶುಪಾಲ ಲೋಕ್ಯಾ ನಾಯ್ಕ್ , ಕಾರ್ಯದರ್ಶಿಯಾಗಿ ದಾಮೋದರ ಮಾಸ್ತರ್, ಕೋಶಾಧಿಕಾರಿಯಾಗಿ ನಿವೃತ್ತ ಎಸ್.ಐ. ಶ್ರೀಧರ ದುಗ್ಗಳ, ಉಪಾಧ್ಯಕ್ಷರಾಗಿ ರಾಜಗೋಪಾಲ ಉಳುವಾರು ಆಯ್ಕೆಯಾದರು.
ಸಮಿತಿಯ ಸದಸ್ಯರುಗಳಾಗಿ ಎಸ್.ಪಿ. ಲೋಕನಾಥ, ಜ್ಞಾನಶೀಲನ್, ಗಂಗಾಧರ, ಪ್ರಶಾಂತ್ ವಿ.ವಿ. , ಪುಟ್ಟಣ್ಣ ಜನತಾ ಕಾಲನಿ, ಶೀನಪ್ಪ ಕೈಪಡ್ಕ, ಚಂದ್ರಶೇಖರ ರೈ, ಕೇಶವ ಆಚಾರ್ಯ, ಸುಧಾಕರ ಬಾಚಿಗದ್ದೆ, ಯಾದವ ಕೆ.ಎಸ್., ಕಾಂತಿ ಬಿ.ಎಸ್., ಕೆ.ವಿ. ಮಂಜುನಾಥ, ಸುರೇಶ್ ಕದಿಕಡ್ಕ, ಅವಿನಾಶ್ ಪಾಟಾಳಿ, ಶ್ರೀಮತಿ ಸುಮತಿ ಶಕ್ತಿವೇಲು, ಈಶ್ವರ ಆಚಾರ್ಯ ಆಯ್ಕೆಯಾದರು.
ಸೇವಾ ಸಮಿತಿ ಸದಸ್ಯರುಗಳಾಗಿ ಜಗದೀಶ್ ಪಿ.ಎಲ್., ವರದರಾಜ್, ದೀಪಕ್ ಪೇರಡ್ಕ, ಶ್ರೀನಿಧಿ ಕದಿಕಡ್ಕ, ಪ್ರೀತಂ ಬಂಟೋಡಿ, ನಾಗಮುತ್ತು, ವಿನಯ ಕುಮಾರ್ ದುಗ್ಗಳ, ದೀಪಕ್ ರೈ, ಕೇಶವ ಬಂಗ್ಳೆಗುಡ್ಡೆ, ಯಶವಂತ, ಯತಿನ್ ಯು.ಜೆ., ಗಣೇಶ, ಶರತ್ ಕೀಲಾರು ಆಯ್ಕೆಯಾದರು.