ಡಾ. ಕೀಲಾರು ಗೋಪಾಲಕೃಷ್ಣಯ್ಯ ಯಕ್ಷೋತ್ಸವದ ಅಭಿಮಾನಿಗಳು ಭಾಗಿ
ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಕೀಲಾರು ಅವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಸಲ್ಲಿಕೆಯು ಡಿ.7ರಂದು ನಡೆಯಿತು.
ಚಹಿರಣ್ಯ ವೆಂಕಟೇಶ ಭಟ್ ಅವರು ಶ್ರೀಮತಿ ವಿಜಯಲಕ್ಷ್ಮಿ ಕೀಲಾರು ಅವರ ಕುರಿತಂತೆ ಮಾತನಾಡಿ , ನುಡಿನಮನ ಸಲ್ಲಿಸಿದರು.
ಮೃತರ ಪುತ್ರ ರಾಜಾರಾಮ ಕೀಲಾರು ಮತ್ತು ಮನೆಯವರು, ಪುತ್ರಿ ಶ್ರೀಮತಿ ಸುಮನ ಶ್ಯಾಮ್ ಭಟ್ ಹಾಗೂ ಅಳಿಯ, ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ಅವರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಯಕ್ಷೋತ್ಸವದ ಯಕ್ಷ ಕಲಾವಿದರು, ಅಭಿಮಾನಿಗಳು ಉಪಸ್ಥಿತರಿದ್ದರು.
ನಿರಂತರವಾಗಿ ನಾಲ್ಕು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.