ಕೋರ್ ಟೆಕ್ನೋಲಜೀಸ್ ಸ್ಥಳಾಂತರಗೊಂಡು ಸೂಂತೋಡು ಎಂಪೋರಿಯಂನಲ್ಲಿ ಶುಭಾರಂಭ

0

ಕಳೆದ ಹಲವು ವರ್ಷಗಳಿಂದ ನವೀಕರಿಸಿದ ಹಲವು ಕಂಪೆನಿಗಳ ಹೊಸ ತಂತ್ರಜ್ಞಾನದ ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್ ಅದರಲ್ಲೂ ಪ್ರಮುಖವಾಗಿ ಮ್ಯಾಸ್ಬುಕ್ ಮತ್ತು ವಿಂಡೋಸ್, ಗೇಮಿಂಗ್ ಕಂಪ್ಯೂಟರ್, ರೆಂಟಲ್ ಕಂಪ್ಯೂಟರ್, ಬಿಲ್ಲಿಂಗ್ ಸಾಫ್ಟ್‌ವೇರ್ ಸಹಿತ ಎಲ್ಲಾ ರೀತಿಯ ಬಿಡಭಾಗ, ಪ್ರಿಂಟರ್, ಸಿಸಿ ಟಿವಿ, ಬಯೋಮೆಟ್ರಿಕ್, ಎಟೆಂಡೆನ್ಸ್ ಉಪಕರಣಗಳನ್ನೊಳಗೊಂಡ ಮಾರಾಟ ಸೇವಾ ಮಳಿಗೆ ಅನೂಪ್ ಕೆ.ಜಿ.ಯವರ ಮಾಲಕತ್ವದ ಕೋರ್ ಟೆಕ್ನೋಲಜೀಸ್ ವಿಸ್ತೃತಗೊಂಡು ಸುಳ್ಯದ ಸರಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸೂಂತೋಡು ಎಂಪೋರಿಯಂನಲ್ಲಿ ಡಿ. ೯ರಂದು ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಸೂಂತೋಡು ಎಂಪೋರಿಯಂ ಮಾಲಕ ಸೂರಯ್ಯ ಸೂಂತೋಡುರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್‌ಗಳ ಅವಶ್ಯಕತೆಯು ಜನರಿಗೆ ಬಹಳ ಇದೆ. ಇದಕ್ಕೆ ಕೋರ್ ಟೆಕ್ನೋಲಜೀಸ್ ಸಂಸ್ಥೆ ಉತ್ತಮ ರೀತಿಯಲ್ಲಿ ಈಗಾಗಲೇ ಸೇವೆಯನ್ನು ನೀಡುತ್ತಿದ್ದು, ನಿಮ್ಮ ಸೇವೆ ಹೀಗೆ ಮುಂದುವರಿಯಲೆಂದು ಶುಭ ಹಾರೈಸಿದರು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ.ರವರು ದೀಪ ಬೆಳಗಿಸಿ ಮಾತನಾಡಿ, ಗ್ರಾಹಕರಿಗೆ ಈಗಿನ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ನೀಡುವ ಜ್ಞಾನವನ್ನು ಅನೂಪ್‌ರವರು ಹೊಂದಿದ್ದು, ಎಲ್ಲಾ ವರ್ಗದವರಿಗೂ ಸಂಸ್ಥೆ ಸೇವೆ ಸೇವೆ ನೀಡಲಿ ಎಂದು ಶುಭಹಾರೈಸಿದರು.


ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ವೆಹಿಕಲ್ ಇಂಡಿಯಾದ ಮಾಲಕ ರಮಾನಾಥ್ ಕೆ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅನೂಪ್‌ರವರ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿ ಜನಾರ್ದನ ಕೊಳೆಂಜಿರೋಡಿ, ತಾಯಿ ಶ್ರೀಮತಿ ಕುಸುಮಾ ಜನಾರ್ದನ, ಹಿತೈಷಿಗಳು, ಬಂಧುಗಳು ಉಪಸ್ಥಿತರಿದ್ದರು.

ಮಾಲಕ ಅನೂಪ್ ಕೆ.ಜೆ. ಮಾತನಾಡಿ, “ಸತತ 5 ವರ್ಷಗಳಿಂದ ಸುಳ್ಯದ ಓಡಬಾಯಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಮ್ಮ ಸಂಸ್ಥೆ ಮಧ್ಯಮ ವರ್ಗ ಮತ್ತು ಬಡ ವರ್ಗದವರಿಗೆ ಕೈಗೆಟಕುವ ದರದಲ್ಲಿ ಕಂಪ್ಯೂಟರ್ ದೊರಕಬೇಕೆಂಬ ಅಭಿಲಾಷೆಯಿಂದ ಕಾರ್ಯನಿರ್ವಹಿಸುತ್ತಿದೆ. ಮಂಗಳೂರು ಮತ್ತು ಪುತ್ತೂರಿನಲ್ಲಿಯೂ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮುಂದೆಯೂ ಎಲ್ಲರೂ ಸಹಕಾರ ನೀಡಬೇಕು” ಎಂದರು. ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.