ಅರಂತೋಡು : ಶ್ರೀ ತಂಬೂರಾಟಿ ಭಗವತಿ ಪ್ರಾದೇಶಿಕ ಸಮಿತಿಯ ವಾರ್ಷಿಕ ಸಭೆ

0

ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರಂತೋಡು ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆಯು ಡಿ.08 ರಂದು ಸಮಿತಿಯ ಅಧ್ಯಕ್ಷ ರಾದ ಶ್ರೀಜಿತ್ ಅರಂತೋಡು ರವರ ಅಧ್ಯಕ್ಷತೆ ಯಲ್ಲಿ ರಬ್ಬರ್ ಉತ್ಪಾದಕರ ಸಂಘ ದ ಸಭಾಭವನ ಅರಂತೋಡಿನಲ್ಲಿ ನಡೆಯಿತು.
ಹಿರಿಯರಾದ ಜನಾರ್ಧನ ಎ. ಎಂ., ಗೋವಿಂದ ಎ. ಕೆ ಮತ್ತು ಅಮ್ಮಣಿ ಚಿಟ್ಟನ್ನೂರು ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಕಾರ್ಯದರ್ಶಿ ಭಾನು ಪ್ರಕಾಶ್ ಕೊ ಡಂಕೇರಿ ಯವರು ಮಂಡಿಸಿದರು.
ಸಭೆಯಲ್ಲಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಕುತ್ತಿಕೋಲು ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕುಂಞ್ಞಿಕೃಷ್ಣನ್ ಕುತ್ತಿಕೋಲು ರವರು ಕ್ಷೇತ್ರದ ಮಹತ್ವ ಗಳನ್ನು ವಿವರಿಸಿದರು. ಇನ್ನೊರ್ವ ಮುಖ್ಯ ಅತಿಥಿ ಚಂದ್ರನ್ ಕುತ್ತಿಕೋಲು ರವರು ಮಾತನಾಡಿ ಕ್ಷೇತ್ರ ದಲ್ಲಿ ನಡೆಯುತ್ತಿರುವ ಜೀರ್ಣೋದ್ದಾರ ಕಾರ್ಯಗಳ ಬಗ್ಗೆ ತಿಳಿಸಿ ಎಲ್ಲರ ಸಹಕಾರ ಯಾಚಿಸುತ್ತ ಅರಂತೋಡು ಪ್ರಾದೇಶಿಕ ಸಮಿತಿಯ ಕಾರ್ಯ ವೈಖರಿ ಯನ್ನು ಪ್ರಶಂಷಿಸಿದರು. ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷ ಪವಿತ್ರನ್ ಗುಂಡ್ಯ ರವರು ಮಾತನಾಡಿ ಕ್ಷೇತ್ರ ದ ಜೊತೆ ನಾವು ಇಟ್ಟುಕೊಳ್ಳ ಬೇಕಾದ ಸಂಭಂದ ಗಳನ್ನು ತಿಳಿಸಿ ಮುಂದಿನ ವರ್ಷ ಅ ರಂಬೂರಿನಲ್ಲಿ ನಡೆಯಲಿರುವ ದೈವoಕಟ್ಟು ಮಹೋತ್ಸವ ಕ್ಕೆ ಸಮಿತಿ ಯ ಸಹಕಾರ ಯಾಚಿಸಿದರು.
ಮಹಿಳಾ ಸಮಿತಿಯ ಪದಾಧಿಕಾರಿಗಳಾದ ಮಾದವಿ ಕೂರಂಗಾಯ ಮತ್ತು ಕಮಲ ರವರು ಶುಭ ಹಾರೈಸಿದರು. ಈ ಸಭೆಯಲ್ಲಿ ಕಳೆದ ಸಾಲಿನಲ್ಲಿ ಎಸ್. ಎಸ್. ಎಲ್ ಸಿ ಮತ್ತು ಪಿ. ಯು. ಸಿ ಉತ್ತೀರ್ಣ ರಾದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಬಳಿಕ ನೂತನ ಸಮಿತಿಯ ರಚನೆಯು ನಡೆದು ಅಧ್ಯಕ್ಷ ರಾಗಿ ಪ್ರದೀಪ್ ಕೆ., ಕಾರ್ಯದರ್ಶಿಯಾಗಿ ಚೇತನ್ ಅರಂತೋಡು, ಉಪಾಧ್ಯಕ್ಷರಾಗಿ ಕುಂಞಿಕಣ್ಣ ಪೆರಾಜೆ, ಕೋಶಾಧಿಕಾರಿಯಾಗಿ ಅಭಿಷೇಕ್ ಕುಲ್ಚಾರು, ಜೊತೆ ಕಾರ್ಯದರ್ಶಿಯಾಗಿ ಪುರುಷೋತ್ತಮ ಕೊಡಂಕೇರಿ, ಸದಸ್ಯರುಗಳಾಗಿ ಶ್ರೀಜಿತ್ ಅರಂತೋಡು, ಭಾನು ಪ್ರಕಾಶ್ ಕೊಡಂಕೇರಿ, ರಕ್ಷಿತ್ ಕೆ. ಪಿ., ಗಣೇಶ್ ಬಿ.ಕೆ., ರಾಜು ಅರ್ಲಡ್ಕ, ಸುಪ್ರೀತ್ ಚಾಂಬಾಡು, ಸುಕುಮಾರ ಚಾಂಬಾಡು, ಬಾಲಕೃಷ್ಣ ಅಂಗಡಿಮಜಲು, ಸತೀಶ್ ತೊ ಡಿಕಾನ, ಕರುಣಾಕರ ಕಡೆಪಾಲ, ಶಶಿ ಬಿ.ಕೆ., ಅಂಬುಜಾಕ್ಷ ಎಲ್ಪಕಜೆ, ಸತೀಶ್ ಕೋಣ ಗುಂಡಿ, ಅಜಯ್ ಬಂಡೆಡ್ಕ ಆಯ್ಕೆಯಾದರು. ಕಾರ್ಯದರ್ಶಿ ಭಾನು ಪ್ರಕಾಶ್ ಕೊಡಂಕೇರಿ ಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಇದೆ ಸಂದರ್ಭದಲ್ಲಿ ಮಹಿಳಾ ಸಮಿತಿಯ ಸಭೆ ನಡೆದು ನೂತನ ಸಮಿತಿಯನ್ನು ರಚಿಸಲಾಯಿತು.