ಪುತ್ತೂರು ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಮಾವೇಶದಲ್ಲಿ ಸಾಹಿತ್ಯ ದಲ್ಲಿ ಸಾಧನೆ ಮಾಡಿದ ಕೊಳ್ತಿಗೆ ವಲಯದ ಪೆರ್ಲoಪಾಡಿ -2 ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಪೆರ್ಲ0ಪಾಡಿ ಯವರಿಗೆ ಪುತ್ತೂರು ಪುರಭವನ ದಲ್ಲಿ ನಡೆದ ತಾಲ್ಲೂಕು ಸಮಾವೇಶದಲ್ಲಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠoದೂರುರವರು ಸನ್ಮಾನ ಮಾಡಿರುತ್ತಾರೆ.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ರಾಜ್ಯ ಸಂಘದ ಪದಾಧಿಕಾರಿಗಳು, ಜಿಲ್ಲಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ತಾಲ್ಲೂಕು ಸಂಘದ ಅಧ್ಯಕ್ಷರು ಕಮಲ ಕಾರ್ಯದರ್ಶಿ ಪುಷ್ಪಲತಾ, ಹಾಗೂ ಪದಾಧಿಕಾರಿಗಳು ತಾಲ್ಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರು ಉಪಸ್ಥಿತರಿದ್ದರು.