ಸಿಂಗಾಪುರದ ಟೆಸ್ಸೆನ್ ಸೋನ್ ನಲ್ಲಿ ನವೆಂಬರ್ 29 ರಿಂದ 30 ರ ವರೆಗೆ ನಡೆದ ಏಷ್ಯಾ ಪೆಸಿಫಿಕ್ ಶಿಟೋರ್ಯ ಕರಾಟೆಡೊ ಚಾಂಪಿಯನ್ ಶಿಪ್ 2024 ರ 14-15 ವರ್ಷ ವಯಸ್ಸಿನ ಹುಡುಗರ ಕುಮಿಟೆ -70ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ವರ್ಷಿತ್ ಎಮ್.ಎನ್ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರು ಮೀನಗದ್ದೆ ನಡುಮನೆ ವಸಂತ ಕುಮಾರ್ ಮತ್ತು ಜಯಶ್ರೀ ವಸಂತ್ ಅವರ ಪುತ್ರರಾಗಿದ್ದು, ಚಂದ್ರಶೇಖರ್ ಕನಕಮಜಲುರವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.
ಇವರಿಗೆ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಪ್ರಾಂಶುಪಾಲ ಅರುಣ್ ಕುಮಾರ್ ಮತ್ತು ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಿದರು. ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಅಭಿನಂದಿಸಿದರು.