ಕನಕಮಜಲು ಸಹಕಾರಿ ಸಂಘ ನಿ‌. ಜಾಲ್ಸೂರು

0

ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆಗೆ ಚುನಾವಣೆ ಹಿನ್ನೆಲೆ

ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದ 14 ಮಂದಿ ನಾಮಪತ್ರ ಸಲ್ಲಿಕೆ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ‌. ಜಾಲ್ಸೂರು ಇದರ ನೂತನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆಗೆ ಡಿ.22ರಂದು ಚುನಾವಣೆ ನಡೆಯಲಿದ್ದು, ಒಟ್ಟು 12 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದಿಂದ 14 ಮಂದಿ ತಮ್ಮ ನಾಮಪತ್ರಗಳನ್ನು ಡಿ.13ರಂದು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದರು.

ಸಾಲಗಾರರಲ್ಲದ ಕ್ಷೇತ್ರದಿಂದ ಎಂ. ಸುಬ್ರಹ್ಮಣ್ಯ ಹೊಳ್ಳ ಹಾಗೂ ಕೆ. ಉಸ್ಮಾನ್ ಅಡ್ಕಾರು, ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಹರಿಪ್ರಕಾಶ್ ಅಡ್ಕಾರು, ಚೆನ್ನಕೇಶವ ಜಾಲ್ಸೂರು, ಅಬ್ದುಲ್ ಮಜೀದ್ ನಡುವಡ್ಕ, ವಿಜಯಕುಮಾರ್ ನರಿಯೂರು, ರಾಮಚಂದ್ರ ಗೌಡ ಅಗೋಳ್ತೆ, ಸಿ.ಎಚ್. ಅಬ್ದುಲ್ ಖಾದರ್ ಕದಿಕಡ್ಕ, ಮಹಿಳಾ ಕ್ಷೇತ್ರದಿಂದ ಜಾಲ್ಸೂರು ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಶ್ರೀಮತಿ ಜಯಂತಿ ಕೋಡಿಯಂಗಡಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಕನಕಮಜಲು ಗ್ರಾ.ಪಂ. ಮಾಜಿ ಸದಸ್ಯ ನ್ಯಾಯವಾದಿ ಮಹಮ್ಮದ್ ಪವಾಝ್ ಕನಕಮಜಲು, ಹಿಂದುಳಿದ ವರ್ಗ ಬಿ‌ ಕ್ಷೇತ್ರದಿಂದ ಹೇಮಚಂದ್ರ ಕುತ್ಯಾಳ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ನಾರಾಯಣ ಪಂಜಿಗುಂಡಿ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬೋಜಪ್ಪ ನಾಯ್ಕ ವಿನೋಬನಗರ ಅವರು ತಮ್ಮ ನಾಮಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.