ಬೊಳುಬೈಲು ಪೀಸ್ ಸ್ಕೂಲ್‌ನಲ್ಲಿ ಡಿ.10ರಿಂದ ರಿಂದ 16 ರವರೆಗೆ 4 ದಿವಸಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಸಂಭ್ರಮದಿಂದ ಜರುಗಿತು.
ಎಲ್ಕೆಜಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳ ನಾಲ್ಕು ಶಾಲಾ ಗುಂಪುಗಳಾದ ಬೈತುಲ್ ಅಹ್ಮದ್, ಬೈತುಲ್ ಅಸ್ಫರ್, ವೈತುಲ್ ಅಝಾರಖ್ ಮತ್ತು ಬೈತುಲ್ ಅಖ್ಧರ್ ( ಕ್ರಮವಾಗಿ ಕೆಂಪು, ಹಳದಿ, ನೀಲಿ ಮತ್ತು ಹಸಿರು) ನಡುವೆ 5 ವಿಭಾಗಳಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಏರ್ಪಡಿಸಲಾಯಿತು.
ಎಲ್ಲಾ ವಿದ್ಯಾರ್ಥಿಗಳು ಬಹಳ ಉತ್ಸಾಹ ಮತ್ತು ಆಸಕ್ತಿಯಿಂದ ಎಲ್ಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ಕೊನೆಗೆ ಬೈತುಲ್ ಅಝಾರಖ್( ನೀಲಿಮನೆ) ಅತ್ಯಧಿಕ ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ನಾಲ್ಕು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮರೋಪ ಸಮಾರಂಭ ಡಿ 15 ರಂದು ಪೀಸ್ ಆಡಿಟೋರಿಯಂನಲ್ಲಿ ನೆರವೇರಿತು.
ಶಾಲೆಯ ಸ್ಥಾಪಕಾದ್ಯಕ್ಷರಾದ ಕೆ. ಅಬೂಬಕರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ಸುಳ್ಯದ ಉದ್ಯಮಿಗಳಾದ ಅಬ್ದುಲ್ಲಾ ಪಿ.ಎಂ.,ಫಾರುಖ್ ಪೈಚಾರ್, ಸಿ.ಎಂ ಅಶ್ರಫ್, ಶಾಲೆಯ ಉಪಾಧ್ಯಕ್ಷರಾದ ಶಂಸುದ್ದೀನ್, ಜಾಲ್ಸೂರು ಗ್ರಾಮ ಪಂಚಾಯಿತ್ ಸದಸ್ಯರಾದ ಮುಜೀಬ್ ಪೈಚಾರ್, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾlಆರ್.ಬಿ ಬಶೀರ್ ಹಾಗೂ ಶಾಲೆಯ ಪ್ರಾಂಶುಪಾಲರಾದ ಮಹಮ್ಮದ್ ಸೈಫಲ್ಲಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಆಯ್ದ ಕೆಲವು ಸಾಂಸ್ಕತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.
ಶಾಲೆಯ ಪ್ರಾಂಶುಪಾಲರು ಮಾತನಾಡಿ ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು.
ಅರೆಬಿಕ್ ಶಿಕ್ಷಕ ಹಸೈನರ್ ಸ್ವಲಹಿ ಅಂತಿಮ ಫಲಿತಾಂಶ ಘೋಷಿಸಿದರು. ಶಾಲಾ ಶಿಕ್ಷಕಿಯರಾದ ಮಮ್ತಾಜ್ ಸ್ವಾಗತಿಸಿ, ಮಿಸ್ರಿಯಾ ವಂದಿಸಿದರು. ಶಿಕ್ಷಕಿ ಜಾಹ್ನವಿ ನಿರೂಪಿಸಿದರು.