ಅಡಿಕೆಗೆ ಎಲೆ ಚುಕ್ಕಿ ರೋಗದ ಬಗ್ಗೆ ಕೃಷಿಕರು ಆತಂಕದಲ್ಲಿದ್ದಾರೆ.ಆತಂಕ ಪಡುವ ಅಗತ್ಯವಿಲ್ಲ.ಅವುಗಳಿಗೆ ಲಘು ಪೋಷಕಾಂಶಗಳ ಕೊರೆಯಿಂದಾಗಿ ರೋಗ ಕಾಣಿಸಿಕೊಳ್ಳುತ್ತದೆ. ಮರಗಳಿಗೆ ಅವುಗಳನ್ನು ನೀಡಿದಾಗ ಎಲೆ ಚುಕ್ಕಿ ರೋಗ ದೂರವಾಗುತ್ತದೆ ಎಂದು ಕೃಷಿ ವಿಜ್ಞಾನಿ,ಅವೆಂಚುರಾ ಆರ್ಗಾನಿಕಾ ಸಂಸ್ಥೆಯ ಮಾಲಕ ಡಾ. ಬಿ.ಕೆ.ವಿಶುಕುಮಾರ್ ಕೃಷಿಕರಿಗೆ ಸಲಹೆ ನೀಡಿದರು.
ಅವರು ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಲೆಚುಕ್ಕಿ ರೋಗವು ತೀವ್ರವಾದ ಶಿಲೀಂಧ್ರ ರೋಗವಾಗಿದ್ದು, ಇದು ಅಡಿಕೆ ಎಲೆಗಳ ಮೇಲೆ ಮತ್ತು ಅಡಿಕೆಗಳ ಮೇಲೆ ಪರಿಣಾಮ ಬೀರುವುದರೊಂದಿಗೆ ಗಮನಾರ್ಹ ಇಳುವರಿ ನಷ್ಟವಾಗುತ್ತದೆ.ಎಲೆಚುಕ್ಕಿಬಾಧಿತ ಎಲೆಗಳನ್ನು ತೆಗೆದುಹಾಕಿ ಸೋಂಕಿತ ಎಲೆಗಳನ್ನು ತೆಗೆದು ಸುಟ್ಟು ಹಾಕಬೇಕು.ಶಿಲೀಂಧ್ರನಾಶಕ ಸಿಂಪಡಿಸಬೇಕು.ಬೋರ್ಡೋ ದ್ರಾವಣ ಮತ್ತು ಲಘು ಪೋಷಕಾಂಶ ಸಿಂಪಡಣೆ ಮಾಡಬೇಕು.ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆ ಮಾಡಬೇಕು.ಮಣ್ಣಿನ ಪಿ ಹೆಚ್ ಕಾಪಾಡಬೇಕು ಎಂದು ಹೇಳಿದರು.
ಅಡಿಕೆ ಮರಕ್ಕೆ ಮನುಷ್ಯರಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು.ಗೊಬ್ಬರದೊಂದಿಗೆ ಪೋಷಕಾಂಶ ನೀಡಿದಾಗ ಎಲೆಚುಕ್ಕಿ ರೋಗ ಬಾಧಿಸುವುದಿಲ್ಲ ಎಂದು ಅವರು ಹೇಳಿದರು.
ನಮ್ಮ ಸಂಸ್ಥೆ ಅವೆಂಚುರಾ ಆರ್ಗಾನಿಕ್ ದ ಉತ್ಪನ್ನ ಮೈಕ್ರೋಪವರ್ ಪೋಷಕಾಂಶ ಬಳಸುವ ಮೂಲಕ ಎಲೆ ಚುಕ್ಕಿ ರೋಗವನ್ನು ನಿಯಂತ್ರಣಕ್ಕೆ ತಂದಿದ್ದೇವೆ.ಹಲವು ಅಡಿಕೆ ತೋಟಗಳಲ್ಲಿ ಇದರ ಪ್ರಯೋಗ ಯಶಸ್ಸು ಕಂಡಿದೆ. ಅಡಿಕೆ ತೋಟಗಳನ್ನು ನಿರ್ವಹಣೆಗೆ ನಾವೇ ತೆಗೆದುಕೊಂಡು ಉತ್ತಮ ಫಲಿತಾಂಶ ಕಂಡಿದ್ದೇವೆ ಎಂದು ಅವರು ಹೇಳಿದರು.
ಅಡಿಕೆ ಮರಕ್ಕೆ ಹಳದಿ ರೋಗ ವೈರಸ್ ನಿಂದಾಗಿ ಬಾಧಿಸುವುದರಿಂದಾಗಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಸರಕಾರ ಮಟ್ಟದಲ್ಲಿಯೂ ವಿಜ್ಞಾನಿಗಳು ನಡೆಸಿದ ಸಂಶೋಧನೆ ಮತ್ತು ಕಾರ್ಯಯೋಜನೆಯಿಂದ ಪರಿಣಾಮ ದೊರಕುತ್ತಿಲ್ಲ. ಹಳದಿರೋಗದ ಆರಂಭ ಹಂತದಲ್ಲಿ ಮರಗಳಿಗೆ ಸರಿಯಾದ ಪೋಷಕಾಂಶ ನೀಡುವುದರಿಂದ ಸ್ವಲ್ಪ ಮಟ್ಟಿನ ಯಶಸ್ಸು ಕಾಣಬಹುದು ಎಂದರು.
ರೈತ ಉತ್ಪಾದಕರ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಮಾತನಾಡಿ ಅವೆಂಚುರಾ ಆರ್ಗಾನಿಕ್ ನ ಉತ್ಪನ್ನ ಮೈಕ್ರೋಪವರ್ ನಮ್ಮ ರೈತ ಉತ್ಪಾದಕರ ಕಂಪೆನಿಯಲ್ಲಿ ಲಭ್ಯವಿದ್ದು,ನಾವು ಅಧಿಕೃತ ಮಾರಾಟಗಾರರಾಗಿದ್ದೇವೆ.ರೈತರು ನಮ್ಮಲ್ಲಿಂದ ಖರೀದಿಸಿ ಅಡಿಕೆ ತೋಟಕ್ಕೆ ಬಳಸಬಹುದು ಎಂದು ಹೇಳಿದರು.
ಕೃಷಿಕರಾದ ಲೋಕಯ್ಯ ಗೌಡ ಅತ್ಯಾಡಿ ಮಾತನಾಡಿ ಡಾ.ವಿಶುಕುಮಾರ್ ರವರ ಈ ಉತ್ಪನ್ನವನ್ನು ಹಲವು ವರುಷಗಳಿಂದ ನಾವು ತೋಟಕ್ಕೆ ಬಳಸುತ್ತಿದ್ದು, ಉತ್ತಮ ಫಲಿತಾಂಶ ದೊರಕಿದೆ. ಅಧಿಕ ಇಳುವರಿಯೊಂದಿಗೆ ಎಲೆಚುಕ್ಕಿ ರೋಗದ ಬಾಧೆ ಕೂಡ ನಮ್ಮ ತೋಟದಲ್ಲಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮಚಂದ್ರ ಪೆಲ್ತಡ್ಕ, ರಶೀದ್ ಜಟ್ಟಿಪಳ್ಳ ಉಪಸ್ಥಿತರಿದ್ದರು.