ಚೆಂಬು :ಆರೋಗ್ಯ ತರಬೇತಿ

0


ಚೆಂಬು ಗ್ರಾ.ಪಂ.ನಲ್ಲಿ ಗ್ರಾಮ ಆರೋಗ್ಯ ತರಬೇತಿ ಶಿಬಿರ ನಡೆಸಲಾಯಿತು.
ಗ್ರಾ.ಪಂ. ಅಧ್ಯಕ್ಷ ತೀರ್ಥರಾಮ್ ಪೂಜಾರಿಯವರ ಅದ್ಯಕ್ಷತೆಯಲ್ಲಿ ಗ್ರಾಮ ಆರೋಗ್ಯ ತರಬೇತಿ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿತಾಲೂಕು ಆರೋಗ್ಯಾಧಿಕಾರಿ ಡಾ. ಚೇತನ್ , ತಾ. ಆರೋಗ್ಯ ಶಿಕ್ಷಣಾಧಿಕಾರಿ ಟಿ. ಎನ್. ಪಾಲಾಕ್ಷ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೀಲಾ ಮೊದಲಾದವರಿದ್ದರು. ಸಾಂಕ್ರಾಮಿಕ ರೋಗಗಳಾದ ಮಧುಮೇಹ ಅಧಿಕ ರಕ್ತದೊತ್ತಡ ಹೃದಯ ಸಂಬಂದಿ ಕಾಯಿಲೆಗಳು ಕ್ಷಯರೋಗ ೧೦೦ದಿನಗಳ ಕ್ಷಯ ಮುಕ್ತ ಅಭಿಯಾನ ಅಪೌಷ್ಟಿಕತೆ ರಕ್ತಹೀನತೆ ಮಾನಸಿಕ ಆರೋಗ್ಯ ಕಾರ್ಯಕ್ರಮ ಮುಟ್ಟಿ ನ ನೈರ್ಮಲ್ಯತೆ ಬಾಲ್ಯವಿವಾಹಗಳ ಬಗ್ಗೆ ತರಬೇತಿ ನೀಡಲಾಯಿತು. ನಂತರ ಎನ್ ಎಸ್ ವಿ ಬಗ್ಗೆ ಎಲ್ಲರಿಗೂ ತಿಳಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು ಪಿ ಡಿ ಒ ಬಿದ್ದಪ್ಪ , ತಾಲೂಕು ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು ಎ ಸಿ ಡಿ ಪಿ ಒ ಶಾಲಾ ಶಿಕ್ಷಕರುಸಂಪಾಜೆ ಪ್ರಾ ಆ ಕೇಂದ್ರದ ಆಡಳಿತ ಅಧಿಕಾರಿಗಳು ಪ್ರಾ ಆ. ಸುರಕ್ಷಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.