ದ.ಕ.ಪೊಲೀಸ್ ,ಬೆಳ್ಳಾರೆ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಕಾಲ್ನಡಿಗೆ ಜಾಥಾವು ಬೆಳ್ಳಾರೆಯಲ್ಲಿ ಡಿ.19 ರಂದು ನಡೆಯಿತು.
ಬೆಳ್ಳಾರೆ ಕೆಳಗಿನ ಪೇಟೆ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಬಳಿಯಿಂದ ಮೇಲಿನ ಪೇಟೆಯವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.
ಜಾಥಾದಲ್ಲಿ ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ತಿಮಪ್ಪ ನಾಯ್ಕ, ಬೆಳ್ಳಾರೆ ಫೊಲೀಸ್ ಠಾಣಾ ಎಸ್.ಐ.ಈರಯ್ಯ ಡಿ.ಎನ್,ಪೊಲೀಸರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.