ಪೆರುವಾಜೆ ಗ್ರಾಮದ ಕೊಲ್ಯ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ಹಾಗೂ ದೈವಗಳ ನೇಮೋತ್ಸವವು ಡಿ.25 ರಂದು ನಡೆಯಲಿದೆ.
ಬೆಳಿಗ್ಗೆ ಗಂಟೆ 8.00 ಕ್ಕೆ ಗಣಹೋಮ, ಗಂಟೆ 9.00 ಕ್ಕೆ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆ 1.00 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 6.00 ಕ್ಕೆ ದೈವದ ಭಂಡಾರ ತೆಗೆಯುವುದು,7.30 ಕ್ಕೆ ಚೌಕಾರು ಮಂತ್ರವಾದಿ ಗುಳಿಗ ಹಾಗೂ ಪಾಷಾಣಮೂರ್ತಿ ನೇಮೋತ್ಸವ ನಡೆಯಲಿದೆ.
ರಾತ್ರಿ ಗಂಟೆ 9.00. ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 10.00 ಕ್ಕೆ ಶ್ರೀ ಕೊರಗ ತನಿಯ ನೇಮೋತ್ಸವ ನಡೆಯಲಿದೆ.
ಆ ಪ್ರಯುಕ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ದೈವಸ್ಥಾನದ ಆಡಳಿತದಾರರಾದ ಪೊಡಿಯ ಮತ್ತು ಜಯಂತ ಕೊಲ್ಯರವರು ವಿನಂತಿಸಿದ್ದಾರೆ.