ಪುತ್ತೂರಿನಲ್ಲಿ ಬಸ್‌ಗೆ ಹತ್ತುತ್ತಿದ್ದ ವೃದ್ದೆಯ ಚಿನ್ನ ಕದ್ದು ಪರಾರಿಯಾಗಲು ಯತ್ನ : ಸುಳ್ಯದಲ್ಲಿ ಕಳ್ಳರ ಬಂಧನ

0

ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಸುಳ್ಯಕಡೆ ಬರುತಿದ್ದ ಬಸ್ಸಿಗೆ ಹತ್ತುತಿದ್ದ ವೃದ್ದ ಮಹಿಳೆಯ ಚಿನ್ನವನ್ನು ಹಿಂದಿನಿಂದ ಎಗರಿಸಿ ಸುಳ್ಯಕ್ಕೆ ಬಸ್ ಹತ್ತಿದ ಕಳ್ಳಿಯರನ್ನು ಪೊಲೀಸರು ಪತ್ತೆ ಹಚ್ಚಿ , ಆರೋಪಿಗಳನ್ನು ಹಿಡಿದು ಠಾಣಾ ರುಚಿ ತೋರಿಸಿದ ಘಟನೆ ಡಿ. 19 ರಂದು ನಡೆದಿದೆ.


ಬಸ್ ನಿಲ್ದಾಣದಲ್ಲಿ ಅಜ್ಜಿಯ ಚಿನ್ನವನ್ನು ಕದ್ದು ಇಬ್ಬರು ಕಳ್ಳಿಯರು ಸುಳ್ಯ ಕಡೆಗೆ ಬರುವ ಬಸ್ಸಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು.
ಆದರೆ ಚಿನ್ನ ಕಳೆದುಕೊಂಡ ಮಹಿಳೆ ಕೂಡಲೇ ಪುತ್ತೂರು ಠಾಣೆಗೆ ದೂರು ನೀಡಿದ್ದು ಕೂಡಲೇ ಕಾರ್ಯಾಚರಣೆಗೆ ಇಳಿದ ಪುತ್ತೂರು ಪೊಲೀಸರು ಬಸ್ಸು ನಿಲ್ದಾಣದ ಸಿ ಸಿ ಟಿ ವಿ ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿಗಳು ಸುಳ್ಯ ಕಡೆ ಬರುವ ಬಸ್ಸಿಗೆ ಹತ್ತಿರುವ ಮಾಹಿತಿ ಲಭಿಸಿದೆ.


ಕೂಡಲೇ ಅವರು ಸುಳ್ಯ ಠಾಣೆಗೆ ವಿವರವನ್ನು ನೀಡಿದ್ದು ಸುಳ್ಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಮೂಲಕ ಕಳ್ಳಿಯರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಪಿಎಸ್ ಐ ಸರಸ್ವತಿ, ಪೊಲೀಸ್ ಸಿಬ್ಬಂದಿಗಳಾದ ಪ್ರಕಾಶ್ ಹಾಗೂ ಪದ್ಮಾವತಿಯವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಬಳಿಕ ಕಳ್ಳತನವಾದ ಚಿನ್ನ ಇರುವುದನ್ನು ಖಚಿತಗೊಂಡ ಬಳಿಕ ಅವನ್ನು ಸುಳ್ಯ ಠಾಣೆಗೆ ಕರೆದೊಯ್ದಿದ್ದು, ಬಳಿಕ ಹೆಚ್ಚಿನ ತನಿಖೆಗೆ ಇಬ್ಬರನ್ನು ಸುಳ್ಯ ಪೊಲೀಸರು ಪುತ್ತೂರು ಪೊಲೀಸರಿಗೆ ಹಸ್ತಾಂತರಿಸಿದರು.
ಆರೋಪಿಗಳು ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರ ಪೊಲೀಸ್ ತನಿಖೆ ಬಳಿಕವೇ ತಿಳಿಯಬೇಕಾಗಿದೆ.