ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆಯ ಪುರಪ್ರವೇಶ ಮತ್ತು ಭೂ ಸ್ಪರ್ಶ ಮಹೋತ್ಸವದ ಕುರಿತು ಪೂರ್ವ ಭಾವಿ ಸಭೆಯುಡಿ.20 ರಂದು ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಬ್ರಹ್ಮರಥದ ದಾನಿಗಳಾದ ಡಾ.ಕುರುಂಜಿ ಚಿದಾನಂದ ಗೌಡ ರವರು ಬ್ರಹ್ಮ ರಥ ಸಮರ್ಪಣಾ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಬಿಡುಗಡೆ ಗೊಳಿಸಿದರು.
ಬ್ರಹ್ಮರಥ ಸಮರ್ಪಣಾ ಸಮಿತಿ ಅಧ್ಯಕ್ಷರಾದ ನಾರಾಯಣ ಕೇಕಡ್ಕ ರವರು ಬ್ರಹ್ಮರಥ ಯಾತ್ರೆಯ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ವಿವರ ನೀಡಿದರು.
ಪ್ರಧಾನ ಕಾರ್ಯದರ್ಶಿ ಡಾ.ಲೀಲಾಧರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ
ಕೃಷ್ಣ ಕಾಮತ್, ಎ.ಒ.ಎಲ್.ಇ ಪ್ರ.ಕಾರ್ಯದರ್ಶಿ
ಅಕ್ಷಯ್ ಕೆ.ಸಿ,
ಗೌರವ ಸಲಹೆಗಾರರು ಎನ್.ಎ.ರಾಮಚಂದ್ರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯೆ ಕಿಶೋರಿ ಶೇಟ್,
ಕಾರ್ಯದರ್ಶಿ ಹರೀಶ್ ಕಂಜಿಪಿಲಿ, ಕೃಪಾಶಂಕರ ತುದಿಯಡ್ಕ, ಜಯಪ್ರಕಾಶ್ ರೈ ಉಪಸ್ಥಿತರಿದ್ದರು. ಬ್ರಹ್ಮರಥ ಯಾತ್ರಾ ಸಮಿತಿ ಸಂಚಾಲಕ ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮರಥ ಸಮರ್ಪಣಾ ಸಮಿತಿಯಪದಾಧಿಕಾರಿಗಳು ಹಾಗೂ ವಿವಿಧ ಉಪ ಸಮಿತಿ ಸದಸ್ಯರು ಭಾಗವಹಿಸಿದರು.