ಕಲ್ಲಪಳ್ಳಿ ಶಾಲೆ ಸಬ್ ಜಿಲ್ಲಾ ಕಲೋತ್ಸವದಲ್ಲಿ‌ ಸಮಗ್ರ ಅಂಕ ಪಡೆದ ಸಂಭ್ರಮ ಮತ್ತು ಕ್ರಿಸ್ಮಸ್ ಹಬ್ಬದ ಸಡಗರ

0

ಕೇರಳ ಕರ್ನಾಟಕ ಗಡಿ ಪ್ರದೇಶವಾದ, ಕನ್ನಡ ಮಾಧ್ಯಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಲ್ಲಪಳ್ಳಿಯ ಮಕ್ಕಳು 2024-25 ನೇ ಸಾಲಿನ ಹೊಸದುರ್ಗ ಸಬ್ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಇತರ ಶಾಲೆಗಳೊಂದಿಗೆ ಪೈಪೋಟಿ ನೀಡಿ ಕಲ್ಲಪ್ಪಳ್ಳಿ ಶಾಲೆಯನ್ನು ಪ್ರತಿನಿಧಿಸಿ ವಿವಿಧ ಸಾಂಸ್ಕೃತಿಕ ಹಾಗೂ ಕಲಾ ವಿಭಾಗದಲ್ಲಿ ಭಾಗವಹಿಸಿ 4 ಪ್ರಥಮ ಸ್ಥಾನದೊಂದಿಗೆ 8 ಎ ಗ್ರೇಡ್ ಮತ್ತು 1 ದ್ವಿತೀಯ ಬಿ ಗ್ರೇಡ್ ಪಡೆದು ವಿಜಯಿಯಾಗಿ ಸಮಗ್ರ 63 ಅಂಕ ಪಡೆದು ಕಾಞಂಗಾಡ್ ಸಬ್ ಜಿಲ್ಲೆಗೆ ಪ್ರಥಮ ಚಾಂಪಿಯನ್ ಪಡೆದು ಕಲ್ಲಪ್ಪಳ್ಳಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಸಬ್ ಜಿಲ್ಲಾ ಮಟ್ಟದ ವೈಯಕ್ತಿಕ ಚಾಂಪಿಯನ್ ಆಗಿ ಕಲ್ಲಪಳ್ಳಿ ಶಾಲೆಯ ವಿದ್ಯಾರ್ಥಿನಿ ಕು|| ಸಾನಿಕ .ಡಿ.ಆರ್. ಪುರಸ್ಕೃತಳಾದಳು. ಆಕೆ ನಾಲ್ಕು ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಪ್ರಥಮ ಮತ್ತು ಎರಡು ಎ ಗ್ರೇಡ್ ಬಹುಮಾನ ಪಡೆದಳು. ಕಾಸರಗೋಡು ಕನ್ನಡ ಅಧ್ಯಾಪಕರ ಸಂಘದ ವತಿಯಿಂದ ಸನ್ಮಾನವನ್ನು ಕೂಡ ಪಡೆದಿದ್ದಾರೆ.

ಕಾಞಂಗಾಡ್‌ ಸಬ್‌ ಜಿಲ್ಲಾ ಕಲೋತ್ಸವದಲ್ಲಿ ಭಾಗವಹಿಸಿ ಸಬ್ ಜಿಲ್ಲಾ ಮಟ್ಟದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿರುವ ಸಾರಿಕಾ ಡಿ.ಆರ್. ಕಲ್ಲಪಳ್ಳಿಯ ದೊಡ್ಡಮನೆ ರಾಜೇಶ್ ಮತ್ತು ಶ್ರೀಮತಿ ಕುಸುಮಾವತಿ ದಂಪತಿಯ ಸುಪುತ್ರಿ.


ಇದರ ಸಂಭ್ರಮಾಚರಣೆಯ ಪ್ರಯುಕ್ತ ದ.20 ರಂದು ಮಕ್ಕಳು ರಕ್ಷಕರು‌ ಮತ್ತು ಶಿಕ್ಷಕರು ಜೊತೆಗೂಡಿ ಕಲ್ಲಪಳ್ಳಿಯ ರಸ್ತೆಯಲ್ಲಿ ಮೆರವಣಿಗೆ ಹೋಗುವ ಮೂಲಕ ಸಂಭ್ರಮವನ್ನು ಆಚರಣೆ ಮಾಡಲಾಯಿತು.

ಕಲೋತ್ಸವದಲ್ಲಿ ಭಾಗವಹಿಸಿ ವಿಜಯಿಯಾದ ಮಕ್ಕಳಿಗೆ ದೊರೆತ ಪ್ರಶಸ್ತಿ‌ ಪತ್ರ ಮತ್ತು ಫಲಕ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವೇಷ ಭೂಷಣಗಳನ್ನು ಧರಿಸಿ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ. ಅಧ್ಯಕ್ಷರಾದ ದಾಮೋದರ ಪೆರುಮುಂಡ ವಹಿಸಿದ್ದರು.‌ ಹಿರಿಯವರಾದ ಪೊನ್ನಪ್ಪ ಗೌಡ ದೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ ಸಮಗ್ರ ಪ್ರಶಸ್ತಿ ವಿತರಣೆ ಮಾಡಿ ಶುಭ ಹಾರೈಸಿದರು. ಪಂಚಾಯತ್ ಸದಸ್ಯ ರಾಧಾಕೃಷ್ಣ ಗೌಡ ಕ್ರಿಸ್ಮಸ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಶುಭ ಹಾರೈಸಿದರು. ಶಾಲೆಯ ಎಂ.ಪಿ.ಟಿ.ಎ ಅಧ್ಯಕ್ಷರಾದ ಶ್ರೀಮತಿ ಕಾಂಚನ ಜಯರಾಮ, ಶಾಲೆಯಲ್ಲಿ ಹಿಂದೆ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರಮೇಶ್ ಪಿ.ಕೆ. ಪೆರುಮುಂಡ, ಶಾಲಾ ನಿಕಟಪೂರ್ವ ಅಧ್ಯಕ್ಷ ರಾದ ರಾಜೇಶ್ ಮಕ್ಕಟ್ಟಿ, ಅಂಗನವಾಡಿ ಕಾರ್ಯಕರ್ತೆ ಲೀನಾ ಇವರು ಆಸೀನರಾಗಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ವಿಠಲ ಅಡ್ವಳ ಸ್ವಾಗತಿಸಿದರು. ಶಿಕ್ಷಕಿ ಅನಿಷಾ ಮೊಂತೆರೊ ವಂದಿಸಿದರು. ಶಿಕ್ಷಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.