ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವ ಹಾಗೂ ಉಪದೈವಗಳ ಕೋಲ
ಪೆರಾಜೆ ಗ್ರಾಮದ ನಿಡ್ಯಮಲೆ ಐನ್ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ, ಕೆಂಚುರಾಯನ ಪೂಜೆ , ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವ, ಉಪದೈವಗಳ ಕೋಲವು ಡಿ.19 ಮತ್ತು 21ರಂದು ನಡೆಯಿತು.
ಡಿ.19ರಂದು ಬೆಳಿಗ್ಗೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಸಂಜೆ ಕೆಂಚುರಾಯನ ಪೂಜೆ ನಡೆಯಿತು. ಡಿ.20ರಂದು ಬೆಳಿಗ್ಗೆ ಗುರುಕಾರ್ನೋರ್ – ಪೊಟ್ಟದೈವ, ಪಂಜುರ್ಲಿ ದೈವ , ಶ್ರೀ ವಿಷ್ಣುಮೂರ್ತಿ ಮತ್ತು ಉಪದೈವಗಳ ಕೋಲ ನಡೆಯಿತು.
ಈ ಸಂದರ್ಭದಲ್ಲಿ ನಿಡ್ಯಮಲೆ ಕುಟುಂಬದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ, ಕುಟುಙಬದ ಹಿರಿಯರಾದ ಎಂ. ಬೋಜಪ್ಪ ಗೌಡ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ನಿಡ್ಯಮಲೆ ಸೇರಿದಂತೆ ನಿಡ್ಯಮಲೆ ಐನ್ ಮನೆ ಕುಟುಂಬಸ್ಥರು ಉಪಸ್ಥಿತರಿದ್ದರು.