ಚೆಂಬು: ಜಿ.ವಿ. ಗಣಪಯ್ಯ ಗುಂಡಿಮಜಲು ಶ್ರದ್ಧಾಂಜಲಿ ಸಭೆ

0

ಚೆಂಬು ಗ್ರಾಮದ ಗುಂಡಿಮಜಲು ನಿವಾಸಿ, ಚೆಂಬು ಕಿನುಮಣಿ ದೈವಸ್ಥಾನದ ಕಾರ್ಯದರ್ಶಿ ದಿ. ಜಿ.ವಿ.ಗಣಪಯ್ಯ ಅವರಿಗೆ ಶ್ರದ್ಧಾಂಜಲಿ ಸಭೆಯು ಡಿ.20ರಂದು ಗುಂಡಿಮಜಲು ಮನೆಯಲ್ಲಿ ಜರುಗಿತು.

ಪ್ರೋ. ಕರುಣಾಕರ ನಿಡಿಂಜಿ ಅವರು ಜಿ.ವಿ. ಗಣಪಯ್ಯ ಅವರು ಸಮಾಜಕ್ಕೆ ಸಲ್ಲಿಸಿದ ಸೇವೆಯ ಕುರಿತು ಮಾತನಾಡಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಲಕ್ಷ್ಮಿ, ಪುತ್ರ ಚಿಂತನ್, ಪುತ್ರಿ ಅನಿತ, , ಸಹೋದರ – ಸಹೋದರಿಯರು, ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.