ತೊಡಿಕಾನ : ಪಡ್ಪು ವಿಷ್ಣುಮೂರ್ತಿ ದೈವದ ಬಾಲಾಲಯ ಪ್ರತಿಷ್ಠೆ

0

ತೊಡಿಕಾನ ಗ್ರಾಮದ ಪಡ್ಪು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮವು ಜೀರ್ಣೋದ್ಧಾರ ಸೇವಾ ಸಮಿತಿ ವತಿಯಿಂದ ಆರಂಭಗೊಂಡಿದ್ದು ಆ ಪ್ರಯುಕ್ತ ಬಾಲಾಲಯ ಪ್ರತಿಷ್ಠೆ ಮತ್ತು ಮುಹೂರ್ತದ ಮರ ಕಡಿಯುವ ಕಾರ್ಯಕ್ರಮ ದ.18ರಂದು ನಡೆಯಿತು.


ರಾಮ ಮಣಿಯಾಣಿ ಆಲೆಟ್ಟಿ ಇವರ ನೇತೃತ್ವದಲ್ಲಿ ಬಾಲಾಲಯ ಪ್ರತಿಷ್ಠೆ ನಡೆಯಿತು. ಚಂದ್ರಶೇಖರ ಆಚಾರ್ಯ ತೊಡಿಕಾನ ಇವರ ನೇತೃತ್ವದಲ್ಲಿ ಮುಹೂರ್ತದ ಮರದ ಪೂಜಾ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಳೆಕಜೆ, ಗೌರವಾಧ್ಯಕ್ಷ ಕೂಸಪ್ಪಗೌಡ ಪಡ್ಪು, ಉಪಾಧ್ಯಕ್ಷರಾದ ಜಗದೀಶ್ ಬಾಳೆಕಜೆ , ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಪಡ್ಪು , ಕೋಶಾಧಿಕಾರಿ ರವೀಂದ್ರ ಜಿ ಪಂಜಿಕೋಡಿ, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಸಂತೋಷ್ ಕುತ್ತಮೊಟ್ಟೆ ಕೆ. ಕೆ. ನಾರಾಯಣ ಕುಂಟುಕಾಡು, ಪದ್ಮಯ ಗೌಡ ಪಡ್ಪು, ಜನಾರ್ದನ ಬಾಳೆಕಜೆ , ಶಿವಪ್ಪ ಬಿಳಿಯಾರು, ತಿಮ್ಮಯ್ಯ ಮೆತಡ್ಕ , ಪ್ರಶಾಂತ್ ಕಾಪಿಲ, ರಾಮಕೃಷ್ಣ ಕುಂಟಕಾಡು, ಬಾಲಕೃಷ್ಣ ಗೌಡ ಮೆತ್ತಡ್ಕ, ಪ್ರಶಾಂತ್ ಕುಂಟುಕಾಡು, ಲೋಕೇಶ್ ಚಿಪ್ರುಗುಡ್ಡೆ , ದಾಮೋದರ ಮಣಿಮುಂಡ , ಲಕ್ಷ್ಮಣ ಪಡ್ಪು, ಸತೀಶ್ ಚಿಟ್ಟನ್ನೂರು, ಅಮ್ಮಣ್ಣಿ ಚಿಟ್ಟನೂರು, ಮಾಲತಿ ಭೋಜಪ್ಪ, ಮಹೇಶ್ ಬಾಳೆಕಜೆ, ರಮೇಶ ಬೊಳ್ಳೂರು , ಮಿಥುನ್ ಹಾಸ್ಪಾರೆ , ಪ್ರಶಾಂತ್ ಮೆತ್ತಡ್ಕ, ಬಾಬಣ್ಣ ಬಾಳೆಕಜೆ , ಹಿಮಕರ ಬಾಳೆಕಜೆ, ಗೋಪಾಲಕೃಷ್ಣ ಗುಂಡಿಗದ್ದೆ, ಸತ್ಯನಾರಾಯಣ ಗುಂಡಿಗದ್ದೆ , ಧನ್ಯಾಕುಮಾರಿ ಪಡ್ಪು , ಚೈತ್ರ ಬಾಳೆಕಜೆ , ಭವ್ಯ ಮುಪ್ಪಸೇರು, ದೇವಕಿ ಬಿ.ಎಸ್ ಬಾಳೆಕಜೆ , ನಮಿತಾ ಪಿದಮಜಲು , ಪದ್ಮಾವತಿ ಪಡ್ಪು , ಧನಲಕ್ಷ್ಮಿ ಅಮೆಮನೆ, ಜಲಜಾಕ್ಷಿ ಪಂಜಿಕೋಡಿ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.