ವಿಜೃಂಭಣೆಯಿಂದ ನಡೆದ ದುಗ್ಗಲಡ್ಕ ಶ್ರೀ ಅಯ್ಯಪ್ಪ ದೀಪೋತ್ಸವ

0

ಕೆಂಚಪ್ಪ ಗುರುಸ್ವಾಮಿಯವರಿಗೆ ಸನ್ಮಾನ- ರಂಜಿಸಿದ ಯಕ್ಷಗಾನ ಬಯಲಾಟ
ದುಗ್ಗಲಡ್ಕದ ಶ್ರೀ ಅಯ್ಯಪ್ಪಭಜನಾ ಮಂದಿರದಲ್ಲಿ
ಶ್ರೀ ಶಬರಿಮಲೆ ಅಯ್ಯgಪ್ಪ ಸ್ವಾಮಿಯ ದೀಪೋತ್ಸವ
ಡಿ.21ರಂದು ನಾರಾಯಣ ಗುರುಸ್ವಾಮಿ ದೊಡ್ಡೇರಿ, ಈಶ್ವರ ಗುರುಸ್ವಾಮಿ ಮಜಿಗುಂಡಿ, ಬಾಬು ಗುರುಸ್ವಾಮಿ ದುಗ್ಗಲಡ್ಕ ಹಾಗೂ ಇವರ ಶಿಷ್ಯ ವೃಂದದವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಧ್ವಜಾರೋಹಣ, ಶ್ರೀ ಗಣಪತಿ ಹವನ,ದೀಪ ಪ್ರತಿಷ್ಠೆಯೊಂದಿಗೆ ಭಜನೆ ಪ್ರಾರಂಭಗೊಂಡಿದೆ
ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.


ಸಂಜೆ
ಭಜನಾ ಮಂಗಳೋತ್ಸವ,
ಶ್ರೀ ಅಯ್ಯಪ್ಪ ಸ್ವಾಮಿ ವೃತಧಾರಿಗಳಿಂದ ಪಾಲುಕೊಂಬು ಮೆರವಣಿಗೆ ಕಂದಡ್ಕದಿಂದ ದುಗ್ಗಲಡ್ಕದವರೆಗೆ ನಡೆಯಿತು.
ರಾತ್ರಿ ಅಂಗನವಾಡಿ ಪುಟಾಣಿಗಳಿಂದ ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ ನಡೆಯಿತು.ಅಯ್ಯಪ್ಪ ವೃತಧಾರಿಗಳಿಂದ ಅಗ್ನಿಸ್ಪರ್ಶ ನಡೆಯಿತು.


ಬಳಿಕ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಮೂಡಬಿದಿರೆ ಇವರಿಂದ
ಮೇದಿನಿ ನಿರ್ಮಾಣ-ಮಹಿಷ ಮರ್ದಿನಿ
ಯಕ್ಷಗಾನ ಬಯಲಾಟ ನಡೆಯಿತು.ಮಹಾಪೂಜೆ ನಡೆಯಿತು.


ಡಿ.22ರಂದು
ಪ್ರಾತಃಕಾಲ ಗಂಟೆ 4-00 ಕ್ಕೆ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿಸೇವೆ, ಮಂಗಲೋತ್ಸವ ನಡೆಯಿತು.

ಕೆಂಚಪ್ಪ ಗುರುಸ್ವಾಮಿಯವರಿಗೆ ಸನ್ಮಾನ
ದುಗ್ಗಲಡ್ಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಯ್ಯಪ್ಪ ದೀಪೋತ್ಸವದ ನೇತೃತ್ವ ವಹಿಸಿಕೊಂಡು ಬರುತ್ತಿರುವ ಸುಳ್ಯದ ಕೆಂಚಪ್ಪ ಗುರು ಸ್ವಾಮಿಯವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.ವೇದಿಕೆಯಲ್ಲಿ
ಭಜನಾ ಮಂದಿರದ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಸುಬ್ರಹ್ಮಣ್ಯ (ಮಣಿ) ಕುಂಬೆತ್ತಿಬನ, ನಾರಾಯಣ ಮಣಿಯಾಣಿ ದುಗ್ಗಲಡ್ಕ, ನಾರಾಯದ ನಾಯ್ಕ ದುಗ್ಗಲಡ್ಕ ಮತ್ತು ಸ್ವಾಮಿಗಳು ಉಪಸ್ಥಿತರಿದ್ದರು.