ಡಿ.25ರಂದು ಸುಳ್ಯದಲ್ಲಿ ಯಾದವ ಸಮಾವೇಶ

0

ಸುಳ್ಯ ತಾಲೂಕು ಯಾದವ ಸಮಾವೇಶದ ಅಂಗವಾಗಿ
ಶ್ರೀ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸನ್ಮಾನ, ಅಭಿನಂದನೆ, ಸಾಂಸ್ಕೃತಿಕ ಸಂಭ್ರಮ ಡಿ.25 ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಲಿದೆ.
ಪೂ 7 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು,9.30ಕ್ಕೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಯಾದವ ಸಭಾ ಕೇಂದ್ರ ಸಮಿತಿಯ ಅಧ್ಯಕ್ಷರಾದ ಎ ಕೆ. ಮಣಿಯಾಣಿ ಉದ್ಘಾಟಿಸಲಿದ್ದಾರೆ.


ಅಧ್ಯಕ್ಷತೆಯನ್ನು ಯಾದವ ಸಭಾ ತಾಲೂಕು ಅಧ್ಯಕ್ಷ ಕರುಣಾಕರ ಹಾಸ್ಪಾರೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ಶಾಸಕರು, ಬೆಂಗಳೂರು ಯಾದವ (ಗೊಲ್ಲ) ಸಂಘದ ಅಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಸತ್ಯನಾರಾಯಣ ಬೆಳೇರಿ ಮತ್ತು ತಾಲೂಕಿನ ವಿವಿಧ ಕ್ಷೇತ್ರದ ಸಾಧಕರುಗಳಿಗೆ ಸನ್ಮಾನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಅ.1.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.