ಕನಕಮಜಲು ಸಹಕಾರಿ ಸಂಘದ ಚುನಾವಣೆ

0

ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬಿಜೆಪಿಯ ನಿರಂಜನ ಬೊಳುಬೈಲು ಗೆಲುವು

ಪ್ರಬಲ ಪೈಪೋಟಿ ನೀಡಿದ ಸ್ವತಂತ್ರ ಅಭ್ಯರ್ಥಿ ಕೆ.ಎಂ. ಬಾಬುಗೆ 76 ಮತಗಳ ಸೋಲು

ಕನಕಮಜಲು ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ನಿರಂಜನ ಬೊಳುಬೈಲು ಅವರು 332 ಮತ ಪಡೆದು ವಿಜಯ ಸಾಧಿಸಿದ್ದಾರೆ.

ಅವರಿಗೆ ಪ್ರಬಲ ಪೈಪೋಟಿ ನೀಡಿದ ಜಾಲ್ಸೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಅವರು 256 ಮತ ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾರಾಯಣ ಪಂಜಿಗುಂಡಿ ಅವರು 92 ಮತ ಪಡೆದು ಸೋಲನುಭವಿಸಿದ್ದಾರೆ.